ಹಾಲಿನ ದರ ಏರಿಕೆ ಬೇಡ

7

ಹಾಲಿನ ದರ ಏರಿಕೆ ಬೇಡ

Published:
Updated:

ಕರ್ನಾಟಕ ಹಾಲು ಒಕ್ಕೂಟವು ಹಾಲಿನ ದರವನ್ನು ಏರಿಸಲು ನಿರ್ಧಾರ ಮಾಡಿದೆ ಎಂಬ ಸುದ್ದಿಯಿಂದ  ಆಘಾತಕಾರಿಯಾಗಿದೆ. ದಿನ ಕಳೆದಂತೆ ಜೀವನ ನಡೆಸುವುದು ನಮ್ಮಂತಹ ಮಧ್ಯಮ ವರ್ಗದವರಿಗೆ  ಕಷ್ಟವಾಗುತ್ತಿದೆ.ಎಲ್ಲ ದಿನ ನಿತ್ಯದ ವಸ್ತುಗಳನ್ನೇ ಗುರಿಯಾಗಿಸಿ ಜನರ ಶೋಷಣೆ ಮಾಡುವುದು ಸರ್ಕಾರದ ಉದ್ದೇಶವೇ? ನೆರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದೆ, ಎಂಬ ಕಾರಣವನ್ನು ನೀಡುತ್ತ, ದರ ಏರಿಕೆಯನ್ನು ಸಮರ್ಥಿಸಿ ಕೊಳ್ಳುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಮಕ್ಕಳಿಗೆ ಹಾಲು ಉಣಿಸಲಾಗದ ತಾಯಂದಿರ ಬವಣೆ ನೆನೆದು  ಬೇಸರವಾಗುತ್ತದೆ. ಈ ರೀತಿಯ ಬೆಲೆ ಏರಿಕೆಯಿಂದ ಕಡಿಮೆ ಆದಾಯ ಮತ್ತು ದಿನಗೂಲಿ ಮಾಡಿಕೊಂಡು ಬದುಕುವವರಿಗೆ ಬದುಕೇ ಭಾರ ಆಗುವುದಿಲ್ಲವೇ? ಆದ್ದರಿಂದ ಬಡವರೂ ಬದುಕುವ ವಾತಾವರಣ ಸೃಷ್ಟಿಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry