ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ 21ಕ್ಕೆ ಪ್ರತಿಭಟನೆ

7

ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ 21ಕ್ಕೆ ಪ್ರತಿಭಟನೆ

Published:
Updated:

ಶಿವಮೊಗ್ಗ:  ಕೆಎಂಎಫ್ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ ಮಾಡಿರುವುದನ್ನು ಖಂಡಿಸಿ, ಪ್ರತಿ ಲೀಟರ್‌ಗೆ ಹಾಲಿಗೆ ರೂ 40 ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಡಿ. 21ರಂದು ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.ರಾಜ್ಯದಲ್ಲಿ ಬರಪರಿಸ್ಥಿತಿ ಇದ್ದು, ರೈತರು ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಕೆಎಂಎಫ್ ಏಪ್ರಿಲ್‌ನಲ್ಲಿ ಪ್ರತಿ ಲೀಟರ್ ಹಾಲಿಗೆರೂ 20.80ದರ ನೀಡುತ್ತಿತ್ತು. ಈಗರೂ 16.90 ನೀಡುತ್ತಿದ್ದು, 7 ತಿಂಗಳಲ್ಲಿರೂ 3.9 ಕಡಿಮೆ ಮಾಡಿದೆ. ಇದರಿಂದ ರೈತರ ಜೀವನ ದುಸ್ತರವಾಗಿದೆ. ಆದ್ದರಿಂದ ರೈತ ಮುಖಂಡ ದಿ.ಎನ್.ಡಿ. ಸುಂದರೇಶ್ ಅವರ 31ನೇ ಸ್ಮರಣೆ ದಿನವಾದ ಡಿ. 21ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಹಾಲಿನ ಬೆಲೆ ಕಡಿಮೆ ಮಾಡಿರುವ ಕೆಎಂಎಫ್, ಪಶುಆಹಾರದ ಬೆಲೆ ಪ್ರತಿ ಟನ್‌ಗೆರೂ 2ಸಾವಿರ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿದೇಶಿ ಶುಂಠಿ ಆಮದು ನಿಷೇಧಿಸಿ: ಚೀನಾದಿಂದ ಹೈಬ್ರೀಡ್ ಶುಂಠಿ ಆಮದು ಆಗುತ್ತಿದ್ದು, ಪ್ರತಿ ಕೆಜಿಗೆ ಕೇವಲರೂ 7ರಿಂದ 8ಕ್ಕೆ ಮಾರಾಟವಾಗುತ್ತಿದೆ. ಇದರಿಂದ ನಮ್ಮ ಶುಂಠಿಗೆ ಪ್ರತಿ ಕ್ವಿಂಟಲ್‌ಗೆರೂ 4 ಸಾವಿರ ಇದ್ದ ಬೆಲೆ ಚೀನಾ ಶುಂಠಿ ಬಂದ ಮೇಲೆರೂ 2 ಸಾವಿರಕ್ಕೆ ಕುಸಿದಿದೆ.ಚೀನಾ ಶುಂಠಿಯನ್ನು ರಾಸಾಯನಿಕ ವಸ್ತುಗಳನ್ನು ಬಳಸಿ 2 ವರ್ಷಗಳಿಗೂ ಹೆಚ್ಚು ಕಾಲದಿಂದ ಸಂಸ್ಕರಿಸಲಾಗಿದೆ. ಇದು ಆರೋಗ್ಯಕ್ಕೆ ಮಾರಕವಾಗಿದೆ. ಕೂಡಲೇ ಚೀನಾ ಶುಂಠಿ ಆಮದು ನಿಷೇಧಿಸಿ ಎಂದು ಆಗ್ರಹಿಸಿದರು. 50 ಕ್ಷೇತ್ರಗಳಲ್ಲಿ ರೈತ ಸಂಘ ಸ್ಪರ್ಧೆ: ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಪ್ರಗತಿರಂಗದ ಅಡಿ 17 ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ರಚಿಸಿ 40ರಿಂದ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿರ್ಧರಿಸಿದೆ ಎಂದರು.ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಜಾ ಪ್ರಗತಿರಂಗದ ಸಭೆ ಕರೆದು ಕ್ಷೇತ್ರ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಗಿದ್ದು, ಜಿಲ್ಲೆಯಲ್ಲಿ ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಗಳು ಸ್ಪರ್ಧಿಸುವರು ಎಂದರು.ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ರೈತಸಂಘದ ಕನಸು. ಪ್ರಜಾಪ್ರಗತಿರಂಗದ ಜತೆ ಮೈತ್ರಿ ಬಗ್ಗೆ ಕೆಜೆಪಿ ಹಾಗೂ ಜೆಡಿಎಸ್ ಸಂಪರ್ಕಿಸಿದ್ದು, ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.ರಾಜ್ಯ ಕಾರ್ಯದರ್ಶಿ ಹಿಟ್ಟೂರು ರಾಜು, ರಾಘವೇಂದ್ರ, ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry