ಹಾಲಿನ ಸಂಘಕ್ಕೆ ವಾಸುದೇವಮೂರ್ತಿ ಅಧ್ಯಕ್ಷ

7

ಹಾಲಿನ ಸಂಘಕ್ಕೆ ವಾಸುದೇವಮೂರ್ತಿ ಅಧ್ಯಕ್ಷ

Published:
Updated:

ನೆಲಮಂಗಲ: ಹಾಲಿನ ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕರಿಗೆ ಸಮರ್ಪಕವಾಗಿ ದೊರೆಯುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ದಾಸನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್. ವಾಸುದೇವಮೂರ್ತಿ ತಿಳಿಸಿದರು.ದಾಸನಪುರದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸತತ 5ನೇ ಸಲ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಡಿ.ಎಂ.ಎಂ.ಗೌಡ ಮತ್ತು ಚುನಾವಣಾಧಿಕಾರಿ ಹೊಂಬೇಗೌಡ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.ಡಿ.ಎಂ. ಚಿಕ್ಕಹನುಮಯ್ಯ ಉಪಾಧ್ಯಕ್ಷರಾಗಿ, ಡಿ.ಎನ್. ಮಂಜುನಾಥ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಡಿ.ಎ.ನಾಗರಾಜು, ಡಿ.ಎನ್. ನಾಗೇಶ್‌ಮೂರ್ತಿ, ಬಿ.ನಾರಾಯಣಪ್ಪ, ಡಿ.ಆರ್. ಮಾರೇಗೌಡ, ಮೂಡ್ಲೇಗೌಡ, ಎ.ಕೃಷ್ಣಪ್ಪ, ಬಿ.ನರಸಿಂಹಮೂರ್ತಿ, ಟಿ.ಶ್ರೀಮತಿ, ಅನಸೂಯ ನಿರ್ದೇಶಕರಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry