ಭಾನುವಾರ, ಆಗಸ್ಟ್ 25, 2019
28 °C

`ಹಾಲುಣಿಸಿ ಮಕ್ಕಳ ಆರೋಗ್ಯ ಕಾಪಾಡಿ'

Published:
Updated:

ಕಿಕ್ಕೇರಿ: ಮಗುವಿಗೆ ತಾಯಿ ಎದೆಹಾಲು ಅಮೃತಕ್ಕೆ ಸಮಾನವಾದುದು ಎಂದು  ತಾಲ್ಲೂಕು ವೈದ್ಯಾಧಿಕಾರಿ ಡಾ. ಹರೀಶ್ ಹೇಳಿದರು.ಅವರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ತನ್ಯಪಾನದಿಂದ ವಂಚಿತರಾದ ಶಿಶುಗಳು ಮುಂದೆ ಮನೋರೋಗಕ್ಕೆ ತುತ್ತಾಗುವ, ಅಪರಾಧಿಗಳಾಗುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಕಾರಣ ಆ ಮಕ್ಕಳಲ್ಲಿನ  ಬಾಂಧವ್ಯ ಚಡಪಡಿಕೆ, ಆತ್ಮವಿಶ್ವಾಸ-ನೈತಿಕ ಮೌಲ್ಯಗಳ ಕೊರತೆ ಎಂಬುದನ್ನು ಮಾನಸಿಕ ಆಸ್ಪತ್ರೆಗಳ ವರದಿಗಳು ದೃಢಪಡಿಸಿವೆ. ಮಗು ಬಯಸಿದಾಗೆಲ್ಲ ಹಾಲುಣಿಸಬೇಕು. ಸ್ತನ್ಯಪಾನ ಮಾಡಿಸುವಾಗ ತಾಯಿಯ ಮನಸ್ಸು-ಶರೀರ ಸ್ವಚ್ಛವಾಗಿರಬೇಕು.ಮಗು ಕೋಪಗೊಂಡಿದ್ದಾಗ-ತಾಯಿ ಔಷಧಿ ಸೇವಿಸಿದ ತಕ್ಷಣ ಹಾಲುಣಿಸದಿರುವುದು ಉತ್ತಮ ಎಂದು ಹೇಳಿದರು.  ಡಾ.ಲಕ್ಷ್ಮೀ, ರಾಜು, ಮಂಗಳ, ರೇಷ್ಮಾ, ಜಯರಾಂ, ತಾಯಂದಿರು ಇದ್ದರು.

Post Comments (+)