ಹಾಲುಮತದ ಕೊಡುಗೆ ದೊಡ್ಡದು

7

ಹಾಲುಮತದ ಕೊಡುಗೆ ದೊಡ್ಡದು

Published:
Updated:

‘ಹನುಮಸಾಗರ: ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಹಾಲುಮತ ಸಮಾಜ ಸಾಕಷ್ಟು ಕೊಡುಗೆ ನೀಡಿದೆ ಎಂದು ಸಂಸದ ಶಿವರಾಮೇಗೌಡ ಹೇಳಿದರು.

ಸಮೀಪದ ತುಗ್ಗಲಡೋಣಿ ಗ್ರಾಮದಲ್ಲಿ ಭಾನುವಾರ ಬೀರಲಿಂಗೇಶ್ವರ ಗ್ರಾಮೀಣಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಡೆದ ಭಕ್ತ ಕನಕದಾಸರ ಜಯಂತ್ಯುತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಾಲಿಮತ ಸಮಾಜದ ಯುವಕರು ಹಾಗೂ ಹಿರಿಯರು ಇಂತಹ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವುದನ್ನು ನೋಡಿದರೆ ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದೆನಿಸುತ್ತದೆ, ಹಾಲುಮತ ಹಾಲಿನಷ್ಟೆ ಪವಿತ್ರವಾಗಿದ್ದು ಸಮಾಜದಲ್ಲಿ ಅಷ್ಟಿಷ್ಟು ಉಳಿದುಕೊಂಡಿರುವ ಅನಕ್ಷರತೆಯನ್ನು ಕಡಿಮೆ ಮಾಡಿ ಸಮಾಜವನ್ನು ಎಲ್ಲ ಕ್ಷೇತ್ರಗಳಲ್ಲಿ ಬಲಪಡಿಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬ ಮುಖಂಡರ ಹೆಗಲಮೇಲಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಮತನಾಡಿ ಭಕ್ತ  ಕನಕದಾಸರು ಹಾಕಿಕೊಟ್ಟಿರುವ ಮಾರ್ಗ ಅನುಸರಿಸಿದರೆ ನಮ್ಮಲ್ಲಿ ಅಡಗಿಕೊಂಡಿರುವ ಮೌಡ್ಯತನವನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ ಅವರ ಮೌಲ್ಯಯುತ ತತ್ವಗಳು ಸಮಾಜವನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ತಾಳಿಭಾಗ್ಯ ನೀಡುವಂತಹ ಕಲ್ಯಾಣ ಕಾರ್ಯಕ್ರಮ ಹಾಕಿಕೊಂಡಿರುವುದು ಶ್ಲಾಘನೀಯ ಹಾಗೂ ಸಮಾಜಕ್ಕೆ ಒಂದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.ತಾಲ್ಲೂಕ ಹಾಲುಮತ ಸಮಾಜದ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ, ಮಹಾರಾಷ್ಟ್ರದ ಹುಲಿಜಂತಿ ಮಠದ ಗುರುಗಳಾದ ಶ್ರೀ, ಲಕ್ಷ್ಮಣ ಪೂಜಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬೀರಪ್ಪ ಶಂಭೋಜಿ ಹಾಗೂ ಬಸವರಾಜ ಕೊಂಡಗೂರಿ ಉಪನ್ಯಾಸ ನೀಡಿದರು. ಜಿ.ಪಂ ಸದಸ್ಯರಾದ ವಿದ್ಯಾಶ್ರೀ ವೀರಣ್ಣ ಗಡಾದ, ಪರಸಪ್ಪ ಕತ್ತಿ, ಹನುಮಕ್ಕ ಹನುಮಂತಪ್ಪ ಚೌಡ್ಕಿ, ಲಕ್ಷ್ಮೀದೇವಿ ಬಸವರಾಜ ಹಳ್ಳೂರ, ವಿನಯಕುಮಾರ ಮೇಲಿನಮನಿ, ರಾಮಣ್ಣ ಸಾಲಭಾವಿ, ತಾ.ಪಂ ಸದಸ್ಯ ಪರಶುರಾಮಪ್ಪ ನಂದಿಹಾಳ, ಶರಣು ತಳ್ಳಿಕೇರಿ, ಗ್ರಾ.ಪಂ ಅಧ್ಯಕ್ಷೆ ಮಲ್ಲವ್ವ ಹರಿಜನ, ಜಿ.ಪಂ ಮಾಜಿ ಉಪಾಧ್ಯಕ್ಷ ಸೋಮಣ್ಣ ಇಂಗಳದಾಳ, ಉದ್ದಿಮೆದಾರ ಮಲ್ಲಣ್ಣ ಪಲ್ಲೇದ, ಕೆ.ಮಹೇಶ, ಶಾಮರಾವ್ ಕುಲಕರ್ಣಿ, ಸತ್ಯಪ್ಪ ರಾಜೂರ, ಶಂಕರ ಕರಪಡಿ, ಗುರಪ್ಪ ಕುರಿ, ಗ್ಯಾನಪ್ಪ ಹುಡೇದ ವೇದಿಕೆಯಲ್ಲಿ ಹಾಜರಿದ್ದರು. ಜಿ.ಪಂ ಹಾಗೂ ತಾ.ಪಂ ಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀ, ಶಿವಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು,ಹಾಲುಮತ ಸಮಾಜದ ಪರವಾಗಿ ಗಟ್ಟಿ ಕುಟುಂಬದವರಿಂದ ಸ್ವಾಮಿಗಳಿಗೆ ಸನ್ಮಾನ ನೀಡಲಾಯಿತು. ಸಮೂಹಿಕ ವಿವಾಹದಲ್ಲಿ 20 ಜೊತೆ ವಧು, ವರರು ಹೊಸ ಬಾಳಿಗೆ ನಾಂದಿ ಹಾಡಿದರು. ಹನುಮನಾಳ ಗುರುಗಂಗಾಧರೇಶ್ವರ ಸಂಗೀತ ಶಾಲೆಯ ಮಕ್ಕಳು ಪ್ರಾರ್ಥಿಸಿದರು, ಮಲ್ಲಣ್ಣ ಪಿ. ಗಟ್ಟಿ ಸ್ವಾಗತಿಸಿದರು, ನೀಲನಗೌಡ ಹೊಸಗೌಡರ, ಮಾರುತಿ ಕ್ವಾಟಿ, ಮಲ್ಲಪ್ಪ ಕುದರಿ ನಿರೂಪಿಸಿದರು, ರಾಮನಗೌಡ ಮಾಲಿಪಾಟೀಲ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry