ಭಾನುವಾರ, ಮೇ 9, 2021
17 °C

ಹಾಲು ಕರೆದ ರಣಬೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲು ಕರೆದ ರಣಬೀರ್

ಕಳೆದ ವಾರ ತಾನೇ ಲೈಂಗಿಕ ಕಾರ್ಯಕರ್ತೆಯರೊಂದಿಗೆ ನಟಿಸಿದ ಅನುಭವ ಹೇಳಿಕೊಂಡಿದ್ದ ರಣಬೀರ್ ಕಪೂರ್ ಇದೀಗ `ಜಾಟ್~ ಕುಟುಂಬದಲ್ಲಿ (ಇಂಡೋ-ಆರ್ಯನ್ ಮೂಲದ ಕುಟುಂಬ) ಕಳೆದ ದಿನದ ಅನುಭವ ಹಂಚಿಕೊಂಡಿದ್ದಾನೆ.ಇಮ್ತಿಯಾಜ್ ಅಲಿ ನಿರ್ದೇಶನದ `ರಾಕ್‌ಸ್ಟಾರ್~ ಚಿತ್ರದಲ್ಲಿ ರಣಬೀರ್‌ಗೆ ಸಾಂಪ್ರದಾಯಿಕ `ಜಾಟ್~ ಕುಟುಂಬದ ಮಗನ ಪಾತ್ರ. ಚಿತ್ರೀಕರಣಕ್ಕೆ ಮುನ್ನ ದೆಹಲಿಯ ಹೊರವಲಯದಲ್ಲಿ ಇರುವ ಒಂದು `ಜಾಟ್~ ಕುಟುಂಬದಲ್ಲಿ ಒಂದು ಇಡೀ ದಿನ ಕಳೆದ ಅಲಿ ಮತ್ತು ರಣಬೀರ್ ಕುಟುಂಬದ ಸದಸ್ಯರ ಚಲನವಲನ ಗಮನಿಸಿದ್ದಾರೆ.ಅವರ ಮನೆಯ ಸಾಂಪ್ರದಾಯಿಕ ಅಡುಗೆ ತಿಂದು, ಸಂಜೆ ಹಸುವಿನ ಹಾಲನ್ನು ಕರೆಯುವುದನ್ನು ಕಲಿತ ರಣಬೀರ್ ಹುಕ್ಕಾ ಸೇದುವುದನ್ನೂ ಕಲಿತನಂತೆ. ಅಲ್ಲಿ ತಮಗಾದ ಅನುಭವ ಎಲ್ಲವೂ ಚಿತ್ರೀಕರಣಕ್ಕೆ ಬಳಕೆಯಾಗದೇ ಇರಬಹುದು. ಆದರೆ ಬದುಕಿಗೆ ಅವೆಲ್ಲಾ ಬೇಕು ಎಂದು ಹೇಳಿ ಮುಖ ಅರಳಿಸಿದ್ದಾನೆ.

ಅಭಿಷೇಕ್‌ಗೆ ಗಾಯ

ರೋಹಿತ್ ಶೆಟ್ಟಿ ನಿರ್ದೇಶನದ `ಬೋಲ್ ಬಚ್ಚನ್~ ಚಿತ್ರೀಕರಣ ಜೈಪುರದಲ್ಲಿ ನಡೆದಿತ್ತು. ರಿಕ್ಷಾ ಹಿಂದೆ ಓಡುವ ಆ್ಯಕ್ಷನ್ ಸನ್ನಿವೇಶದಲ್ಲಿ ಭಾಗವಹಿಸಿದ್ದ ಅಭಿಷೇಕ್ ಬಚ್ಚನ್ ಆಯತಪ್ಪಿ ನೆಲಕ್ಕೆ ಬ್ದ್ದಿದ. ತಕ್ಷಣ ರೋಹಿತ್ ಶೆಟ್ಟಿ ಅಭಿಷೇಕ್‌ಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ಕಳಿಸಿಕೊಟ್ಟರು.`ಅಭಿಷೇಕ್ ಕೈಕಾಲಿಗೆ ಸಣ್ಣಪಟ್ಟು ಗಾಯಗಳಾಗಿವೆ. ಆದರೆ ಬಲಗಣ್ಣಿನ ಪಕ್ಕದಲ್ಲಿ ಕೊಂಚ ದೊಡ್ಡ ಗಾಯವಾಗಿದೆ. ಅಲ್ಲಿಗೆ ಆರು ಹೊಲಿಗೆ ಹಾಕಲಾಗಿದ್ದು. ಇದೀಗ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ~ ಎಂದು ರೋಹಿತ್ ತಿಳಿಸಿದ್ದಾರೆ.`ಅಭಿಷೇಕ್ ಕಣ್ಣಿಗೆ ಗಾಯವಾಗಿದೆ ಎಂದು ಹರಡಿದ ಸುದ್ದಿಯಿಂದ ನಾವು ತುಂಬಾ ಗಾಬರಿಗೊಂಡೆವು. ಆದರೆ ಅವನನ್ನು ಪ್ರತ್ಯಕ್ಷ ನೋಡಿದ ನಂತರವೇ ನಮಗೆ ನೆಮ್ಮದಿಯಾಗಿದ್ದು~ ಎಂದು ಅಮಿತಾಬ್ ಬಚ್ಚನ್ ಹೇಳಿಕೊಂಡಿದ್ದಾರೆ.

 

ಚಿತ್ರದಲ್ಲಿ ಅಭಿಷೇಕ್ ಜೊತೆ ನಟಿಸುತ್ತಿರುವ ಅಜಯ್ ದೇವಗನ್, ಅಸಿನ್, ಪ್ರಾಚಿ ದೇಸಾಯಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.