ಶುಕ್ರವಾರ, ಮೇ 20, 2022
24 °C

ಹಾಲು ಕುದಿಸುತ್ತಿದ್ದೀರಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲು ಕುದಿಸುತ್ತಿದ್ದೀರಾ!

ಪ್ರತಿ ದಿನ ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುವ ಹಾಲಿನ ಪ್ಯಾಕೆಟ್‌ಅನ್ನು ಕೈಗೆತ್ತಿಕೊಂಡು ನೀವು ಬಹುಶಃ ಅಡುಗೆ ಮನೆಯಲ್ಲಿ ಪಾತ್ರೆಗೆ ಎರೆದು ಕುದಿಸಬಹುದು. ಈಗ ಪ್ರಶ್ನೆ ಏನೆಂದರೆ ನೀವೇಕೆ ಹಾಲನ್ನು ಕುದಿಸಬೇಕು? ಕೆಲವರಿಗೆ ಇದು  ಅಭ್ಯಾಸ. ಇನ್ನು ಕೆಲವರ ಪ್ರಕಾರ ಹಾಲನ್ನು ಕುದಿಸುವುದರಿಂದ ಅದರಲ್ಲಿನ ಹಾನಿಕಾರಕ ಕೀಟಾಣುಗಳನ್ನು ನಾಶಪಡಿಸಬಹುದು. ಹೀಗೆ ಇನ್ನೂ ಹಲವಾರು ಉತ್ತರಗಳು ಬರಬಹುದು. ಸರಿ...* ಹಾಲನ್ನು ಕುದಿಸುವುದರಿಂದ ಹಾಲಿನಲ್ಲಿರಬಹುದಾದ ಕೀಟಾಣುಗಳನ್ನು ಕೊಲ್ಲಬಹುದು.  ಆದರೆ ಅದರ ಜತೆಗೆ ಪೌಷ್ಟಿಕಾಂಶಗಳೂ ನಾಶವಾಗುತ್ತವೆಯೆ?

ಹಾಲನ್ನು ಕುದಿಸುವುದರಿಂದ ಅದರಲ್ಲಿರುವ ಹಾನಿಕಾರಕ ಕೀಟಾಣುಗಳನ್ನು ನಾಶಪಡಿಸಬಹುದು ಎನ್ನುವುದು ನಿಜ. ಆದರೆ ಇದರಿಂದ ಹಾಲಿನ ಎಲ್ಲ ಅಪರಿಶುದ್ಧತೆಗಳು ಮುಕ್ತವಾಗುವುದಿಲ್ಲ.ಹಾಲನ್ನು ಕುದಿಸುವುದರಿಂದ ಬಹುತೇಕ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು. ಸುರಕ್ಷಿತವಾದ ಹಾಲನ್ನು ಪ್ರತಿ ದಿನ ಕುಡಿಯುವುದು ಒಳ್ಳೆಯ ಉದ್ದೇಶವೇ ಆಗಿದೆ. ದಿನ ನಿತ್ಯದ ಪೌಷ್ಟಿಕತೆಗೆ ಇದು ಅಗತ್ಯ. ಆದರೆ ಮತ್ತೊಂದು ಅಂಶವನ್ನು ಇಲ್ಲಿ ಗಮನಿಸಬೇಕಾಗುತ್ತದೆ.ಹಾಲಿನಲ್ಲಿ ಅನೇಕ ಪೌಷ್ಟಿಕಾಂಶಗಳು ಇವೆ. ಪ್ರೊಟೀನ್ ಸಂಪದ್ಭರಿತವಾಗಿದೆ. ವಿಟಮಿನ್, ಖನಿಜಾಂಶಗಳು, ಕ್ಯಾಲ್ಸಿಯಂ, ವಿಟಮಿನ್ ಎ,ಡಿ,ಬಿ1,ಬಿ12 ಮತ್ತು ಕೆ ಇದರಲ್ಲಿದೆ.ಆದರೆ ಹಾಲನ್ನು ಕುದಿಸುವುದರಿಂದ ಇದರಲ್ಲಿನ ಹಲವಾರು ಪೋಷಕಾಂಶಗಳು ನಾಶವಾಗುತ್ತವೆ. ಮುಖ್ಯವಾಗಿ ಬಿ ಸಮೂಹದ ವಿಟಮಿನ್‌ಗಳಿಗೆ ಧಕ್ಕೆಯಾಗುತ್ತದೆ.* ಕುದಿಸಬೇಕೆ? ಬೇಡವೇ?

ಇದು ನಿರ್ಣಾಯಕವಾದ ಪ್ರಶ್ನೆ. ಆದರೆ ಈ ಬಗ್ಗೆ ಯೋಚನೆ ಮಾಡಬೇಕಾದ್ದೆ. ಒಮ್ಮೆ ಯೋಚಿಸಿ. ನಿಮ್ಮ ಮನೆ ಬಾಗಿಲಿಗೆ ಹಾಲಿನ ಪ್ಯಾಕೆಟ್ ಬರುವ ಮುನ್ನ ಮೋಟಾರು ವಾಹನಗಳಲ್ಲಿ ಭಾರಿ ಕ್ಯಾನುಗಳಲ್ಲಿ ಬಂದಿರುತ್ತದೆ. ಅದಕ್ಕೂ ಮುನ್ನ ಬೇರೆ ಬೇರೆ ಮೂಲಗಳಿಂದ ಬಂದಿರುತ್ತದೆ.* ಹಾಲನ್ನು ಕುದಿಸದಿದ್ದರೆ ಏನಾಗುತ್ತದೆ?


ಪಾಶ್ಚರೈಸೇಶನ್ ಮಾಡಿದ ಹಾಲಿನ ಬಗ್ಗೆ ಕೇಳಿದ್ದೇವೆ. ಇದನ್ನು ಬಹುತೇಕ ನಾವೆಲ್ಲ ಬಳಸುತ್ತಿದ್ದೇವೆ. ಪಾಸ್ಚರೈಸೇಶನ್ ಮಾಡಿದ ಹಾಲು ಕುಡಿಯಲು ಆರೋಗ್ಯಕರ ಮತ್ತು ಸುರಕ್ಷಿತವಾಗಿರುತ್ತದೆ.

ಎಲ್‌ಟಿಎಲ್‌ಟಿ ಮತ್ತು ಎಚ್‌ಟಿಎಸ್‌ಟಿಯು ಪಾಸ್ಚರೈಸೇಶನ್‌ನಲ್ಲಿ ಸಾಮಾನ್ಯ ಪ್ರಕ್ರಿಯೆ. ಇದು ಎಲ್ಲ ರೋಗಕಾರಕ ಅಂಶಗಳನ್ನು ನಾಶಪಡಿಸದಿದ್ದರೂ, ಬಹುತೇಕವುಗಳನ್ನು ನಾಶಪಡಿಸುತ್ತದೆ.ಹಾಲನ್ನು ರೆಫ್ರಿಜರೇಟರ್‌ನಲ್ಲಿಡುವುದು ಉತ್ತಮ. ಹೊರಗಿನ ಪರಿಸರಕ್ಕೆ ತೆರೆಯಲ್ಪಟ್ಟಾಗ ಉಷ್ಣತೆ ಹೆಚ್ಚಿರುವುದರಿಂದ ಹಾಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ನಂತರ ಕುದಿಸುವುದು ಉತ್ತಮ. ಆದರೆ ಇದರಿಂದ ಪೌಷ್ಟಿಕತೆಯ ಗತಿ ?* ಹಾಲಿನಲ್ಲಿ ಪೌಷ್ಟಿಕತೆಯನ್ನು ಉಳಿಸಿಕೊಳ್ಳುವುದು ಹೇಗೆ?

ವಾಸ್ತವಿಕವಾಗಿ ಎರಡು ದಾರಿಗಳು ಇವೆ. ಮೊದಲನೆಯದಾಗಿ ಸಮರ್ಪಕವಾದ ವಿಧಾನದಲ್ಲಿ ಕುದಿಸಬೇಕು. ಇದರಿಂದ ಹಾಲಿನಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳು ಇಲ್ಲಿವೆ.* ಅತಿ ಹೆಚ್ಚು ತಾಪಮಾನದೊಂದಿಗೆ ಸುದೀರ್ಘ ಸಮಯ ತೀವ್ರವಾಗಿ ಕುದಿಸುವುದು ಬೇಡ.* ಕುದಿಸಿದ ನಂತರ ಹೊರಗೆ ತೆರೆದಿಡುವುದು ಬೇಡ. ಬದಲಿಗೆ ರೆಫ್ರಿಜರೇಟರ್‌ನಲ್ಲಿಡಿ.* ಪದೇ ಪದೇ ಹಾಲು ಕುದಿಸಬೇಡಿ. ಕುದಿಸುವಾಗ ಕದಡಲು ಮರೆಯದಿರಿ* ಹಾಲನ್ನು ಮತ್ತೆ ಕುದಿಸಲು ಮೈಕ್ರೊವೇವ್ ಒಲೆಗಳನ್ನು ಬಳಸದಿರಿಹಾಲನ್ನು ಅತಿ ಹೆಚ್ಚು ತಾಪಮಾನದಲ್ಲಿ ಕುದಿಸುವುದು ಮುಂತಾದ ಅಭ್ಯಾಸಗಳು ನಮ್ಮ ದೇಶದಲ್ಲಿ ಬೆಳೆದು ಬಂದಿದೆ. ಆದರೆ ಇದರಿಂದ ಅವುಗಳಲ್ಲಿರುವ ಪೋಷಕಾಂಶಗಳು ನಶಿಸುತ್ತವೆ ಎಂಬುದನ್ನು ಮರೆಯಬಾರದು.ಇಂತಹ ಅಭ್ಯಾಸಗಳಿಂದ ದೂರವಿದ್ದು, ಹಾಲಿನ ಪೋಷಕಾಂಶಗಳನ್ನು ರಕ್ಷಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಎನ್ನುತ್ತಾರೆ ಹೊಸದಿಲ್ಲಿಯ ಮ್ಯೋಕ್ಸ್ ಆಸ್ಪತ್ರೆಯ ಮುಖ್ಯ ಡಯಟೀಶಿಯನ್ ಆಗಿರುವ ಡಾ. ರಿತಿಕಾ ಸಾಮ್‌ದಾರ್.  ಜನರು ಹಾಲನ್ನು ಕುದಿಸುವ ವೇಳೆಯಲ್ಲಿ ಅದರಲ್ಲಿನ ಪೋಷಕಾಂಶನಾಶವಾಗುತ್ತವೆ ಎಂಬುದನ್ನು ಚಿಂತಿಸುವುದಿಲ್ಲ. ಇದು ತಪ್ಪಬೇಕು ಎನ್ನುತ್ತಾರೆ ಇಬ್ಬರು ಮಕ್ಕಳ ತಾಯಿ, ಗೃಹಿಣಿ ಶ್ರದ್ಧಾ.ಈಗ ಡೇರಿ ತಾಂತ್ರಿಕತೆ ಬೆಳೆದಿರುವುದರಿಂದ ಉತ್ತಮ ಸಂಸ್ಕರಿತ ಹಾಲು ಗ್ರಾಹಕರಿಗೆ ಸಿಗುತ್ತಿದೆ. ಇದು ರೋಗಾಣುಗಳಿಂದ ಮುಕ್ತವಾಗಿರುತ್ತದೆ. ಅಂತಹ ಹಾಲು ಸುರಕ್ಷಿತವಾಗಿರುತ್ತದೆ.

 

ಅಲ್ಲಿ ಅಲ್ಟ್ರಾ ಹೀಟ್ ಟ್ರೀಟ್‌ಮೆಂಟ್ (ಯುಎಚ್‌ಟಿ) ಮುಂತಾದ ವಿಧಾನಗಳ ಮೂಲಕ ಹಾಲನ್ನು ಸಂಸ್ಕರಿಸುತ್ತಾರೆ. ಹೀಗಾಗಿ ಹಾಲನ್ನು ಕುದಿಸುವ ವೇಳೆ, ಪೌಷ್ಟಿಕತೆ ನಾಶವಾಗದಂತೆ ಕುದಿಸುವುದರತ್ತ ಗಮನವಿಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.