ಹಾಲು ಜೇನು!

7

ಹಾಲು ಜೇನು!

Published:
Updated:
ಹಾಲು ಜೇನು!

ಮೈಸೂರಿನ ಧ್ರುವಕುಮಾರ್ ಎಂಬುವರ ಹಸುವನ್ನು ಹಿಡಿದಿದ್ದ ಬಾಲಕನ ಕಣ್ಣುಗಳಲ್ಲಿ ಆನಂದ. 40.615 ಕೆ.ಜಿ. ತೂಕದಷ್ಟು ಹಾಲನ್ನು ಕೊಟ್ಟ ಈ ಹಸುವಿಗೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ.ಅಂದಹಾಗೆ, ಭಾನುವಾರ ಕಂಟೋನ್ಮೆಂಟ್‌ನ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ನಡೆದದ್ದು ಅತಿ ಹೆಚ್ಚು ಹಾಲು ಕೊಡುವ ಹಸುಗಳ ನಡುವಿನ ಸ್ಪರ್ಧೆ. ಗೋಪಾಲಕರು ಉತ್ಸಾಹದಿಂದ ಹಾಲು ಕರೆಯುತ್ತಿದ್ದರೆ ಅದನ್ನು ನೋಡಲು ಇನ್ನೊಂದು ದಂಡು ನೆರೆದಿತ್ತು. ಆಕಾರದಲ್ಲಿ ದೊಡ್ಡದಾಗಿದ್ದ ಹಸುಗಳು ಎಷ್ಟು ಹಾಲು ಕೊಡುತ್ತವೆ ಎಂಬುದನ್ನು ಎಲ್ಲರೂ ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದರು. ಬೆಂಗಳೂರು ಮಹಾನಗರ ಗೋಪಾಲಕರ ಸಂಘವು ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry