ಭಾನುವಾರ, ಆಗಸ್ಟ್ 18, 2019
23 °C

ಹಾಲು ಸವಿದು ನಲಿದ ಮಕ್ಕಳು

Published:
Updated:

ಗುಲ್ಬರ್ಗ: ತಾಲ್ಲೂಕಿನ ಇಟಗಾ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ `ಕ್ಷೀರಭಾಗ್ಯ' ಯೋಜನೆಗೆ ಚಾಲನೆ ಸಿಕ್ಕಿತು.ಎಸ್.ಡಿ.ಎಂ.ಸಿ. ಅಧ್ಯಕ್ಷ ರುದ್ರಮುನಿ ಹೇರಮಠ, ಚಂದ್ರಕಾಂತ ದೊಡ್ಡಮನಿ, ಮಲ್ಲಯ್ಯ ಗುತ್ತೇದಾರ, ಗಣಪತಿ ಮಿಣಜಗಿ, ಸೈಬಣ್ಣ ನಡುಗಟ್ಟಿ ಮತ್ತಿತರರು ಇದ್ದರು.`ಕ್ಷೀರಭಾಗ್ಯ' ಆರಂಭ

ಚಿತ್ತಾಪೂರ: ತಾಲ್ಲೂಕಿನ ಸೋಮ್ಲಾನಾಯಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಮುಖ್ಯ ಶಿಕ್ಷಕ ವಲಿ ಅಹ್ಮದ ಕರಜಿಗಿ ಈಚೆಗೆ ಚಾಲನೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ, ಸವಿತಾ, ಮಾನಿಬಾಯಿ, ಸಹ ಶಿಕ್ಷಕ ಶಮಶಿರ್ ಪಟೇಲ್ ಉಪಸ್ಥಿತರಿದ್ದರು.ಚಾಲನೆ: ಹರಿಜನವಾಡಾ ಹಲಕಟ್ಟಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಗ್ರಾಮ ಪಂಚಾಯಿತಿ ಸದಸ್ಯ ಗುರುನಾಥ ಈಚೆಗೆ ಚಾಲನೆ ನೀಡಿದರು. ಮುಖ್ಯ ಗುರು ಸೋಂದಪ್ಪ ಬಬಲಾದ, ಸಹ ಶಿಕ್ಷಕ ಮಲ್ಲಣ್ಣ ಜಿರೋಳಿ ಇದ್ದರು.ಅಫಜಲಪುರ: ತಾಲ್ಲೂಕಿನ ದಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಸೊರಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಭೀಮಾಶಂಕರ ಪಾಟೀಲ, ಮುಖ್ಯ ಗುರು ಬಸಣ್ಣ ಎಸ್.ಹನ್ನೂರ, ಶಿಕ್ಷಕ ದೇವಿಂದ್ರ ಎಸ್.ಯರಗಲ್, ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ ಪಾಟೀಲ, ಎಸ್‌ಡಿಎಂಸಿ ಸದಸ್ಯರಾದ ಬಾಬುಗೌಡ ಪಾಟೀಲ, ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಪತ್ತಾರ, ಯಲ್ಲನಗೌಡ ಪಾಟೀಲ ಉಪಸ್ಥಿತರಿದ್ದರು.ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ

ಗುಲ್ಬರ್ಗ: ನಗರದ ನೆಹರುಗಂಜನಲ್ಲಿ ರುವ ಶ್ರೀನಗರೇಶ್ವರ ಬಾಲ ವಿಕಾಸ ಮಂದಿರ ಹಿರಿಯ ಪ್ರಾಥಮಿಕ ಹಾಗೂ ಶ್ರೀಶರಬಯ್ಯಾ ಗಾದಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಚೆಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು.ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಮುಕ್ಕಾ ಇದ್ದಾರೆ.

Post Comments (+)