ಶುಕ್ರವಾರ, ಮೇ 7, 2021
25 °C

ಹಾಲ್ ಆಫ್ ಫೇಮ್: ಅಂಬ್ರೋಸ್‌ಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಐಎಎನ್‌ಎಸ್): ಮಾಜಿ ವೇಗದ ಬೌಲರ್‌ಗಳಾದ ಕರ್ಟ್ಲಿ ಅಂಬ್ರೋಸ್ ಮತ್ತು ಅಲನ್ ಡೇವಿಡ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) `ಹಾಲ್ ಆಫ್ ಫೇಮ್~ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ಕೂಡಾ ಪ್ರತಿಷ್ಠಿತರ ಪಟ್ಟಿಯನ್ನು ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ದಿವಂಗತ ಫ್ರೆಡ್ರಿಕ್ ಸ್ಪಫೋರ್ಥ್ ಅವರ ಹೆಸರನ್ನೂ `ಹಾಲ್ ಆಫ್ ಫೇಮ್~ ಪಟ್ಟಿಗೆ ಸೇರಿಸಲಾಗಿದೆ.ಐಸಿಸಿ `ಹಾಲ್ ಆಫ್ ಫೇಮ್~ ಪಟ್ಟಿಯಲ್ಲಿ ಈಗಾಗಲೇ 64 ಹೆಸರುಗಳು ಇವೆ. ಇದರಲ್ಲಿರುವ ಮಹಿಳಾ ಆಟಗಾರ್ತಿ ಒಬ್ಬರು ಮಾತ್ರ. ಇದೀಗ ಈ ಪಟ್ಟಿಯನ್ನು ಸೇರಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಗೌರವ ಬೆಲಿಂಡಾ ತಮ್ಮದಾಗಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.