ಶುಕ್ರವಾರ, ಮೇ 14, 2021
27 °C

ಹಾಳು ಬಿದ್ದ ಕೃಷಿ ಪಾಠಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮಾರು 20ರಿಂದ 25ವರ್ಷಗಳ ಹಿಂದೆಯಷ್ಟೆ ಕೃಷಿ ಪಾಠಶಾಲೆಗೆ ರೈತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸರ್ಕಾರದಿಂದ ನಿರ್ಮಿಸಿದ ಸುಸಜ್ಜಿತವಾದ ಎರಡು ಕಟ್ಟಡಗಳು ಹತ್ತು ವರ್ಷಗಳಿಂದ ಹಾಳುಬಿದ್ದಿವೆ.ಈ ಕಟ್ಟಡಗಳಲ್ಲಿ ವಿಶಾಲವಾದ ಕೊಠಡಿಗಳಿದ್ದು, ಕೊಠಡಿಗಳಿಗೆ ಸಾಕಷ್ಟು ಗಾಳಿ ಬೆಳಕು ಬರಲು ಸಾಕಷ್ಟು ಕಿಟಕಿಗಳನ್ನು ಹೊಂದಿದ್ದು, ಒಳ್ಳೆಯ ಗುಣಮಟ್ಟದಿಂದ ಕಟ್ಟಡವನ್ನು ನಿರ್ಮಿಸಿರುವುದರಿಂದ ಕಟ್ಟಡವು ಗಟ್ಟಿಯಾಗಿದೆ.ಕಟ್ಟಡಕ್ಕೆ ಇದುವರೆಗೂ ಯಾವುದೇ ರೀತಿಯಲ್ಲಿ ಹಾನಿಯಾಗಿರುವುದಿಲ್ಲ. ಕಿಟಕಿ ಮತ್ತು ಬಾಗಿಲುಗಳ ಡೋರ್‌ಗಳು ಮಾತ್ರ ಹಾಳಾಗಿರುತ್ತವೆ.ಸುಮಾರು 250ಎಕರೆ ವಿಸ್ತಿರ್ಣದಲ್ಲಿ ಕೃಷಿ ಅಭಿವೃದ್ದಿ ಕೇಂದ್ರವನ್ನು ಸರ್ಕಾರವು 1973ರಲ್ಲಿ ಸ್ಥಾಪಿಸಲಾಯಿತು, ನಂತರದ ದಿನಗಳಲ್ಲಿ ಸರ್ಕಾರದಿಂದ ಜಿಲ್ಲೆಗೊಂದರಂತೆ ಕೃಷಿ ಪಾಠಶಾಲೆಯನ್ನು  ಪ್ರಾರಂಭಿಸುವ ಸಮಯದಲ್ಲಿ ತ್ಯಾವಣಿಗೆ ಗ್ರಾಮವು ಶಿವಮೊಗ್ಗ ಜಿಲ್ಲೆ ಸೇರಿದ್ದರಿಂದ ಇಲ್ಲಿ ಕೃಷಿ ಪಾಠಶಾಲೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳಿರುವುದರಿಂದ ತ್ಯಾವಣಿಗೆ ಗ್ರಾಮದ ಕೃಷಿ ಅಭಿವೃದ್ಧಿ ಕೇಂದ್ರದಲ್ಲಿ 1978ರಲ್ಲಿ ಪ್ರಾರಂಭಿಸಲಾಯಿತು.ದಾವಣಗೆರೆಯನ್ನು ಜಿಲ್ಲೆಯನ್ನಾಗಿ ಪರಿವರ್ತಿಸಿದಾಗ ತ್ಯಾವಣಿಗೆ ಗ್ರಾಮವು ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಸೇರಿತು. ಈಗಾಗಲೇ ದಾವಣಗೆರೆ ಜಿಲ್ಲೆಯ ಕಾಡಜ್ಜಿಯಲ್ಲಿ ಕೃಷಿ ಪಾಠಶಾಲೆ ಇದ್ದುದರಿಂದ ಈ ಕೃಷಿ ಪಾಠಶಾಲೆಯನ್ನು 2001ರಲ್ಲಿ ಹಳ್ಳಿಕೆರೆಗೆ ಸ್ಥಳಾಂತರಿಸಲಾಯಿತು ಎನ್ನುತ್ತಾರೆ ಸ್ಥಳೀಯರು. ಅಂದಿನಿಂದ ತ್ಯಾವಣಿಗೆ ಕೃಷಿ ಪಾಠಶಾಲೆಯನ್ನು ಮುಚ್ಚಲಾಯಿತು. ಈಗ್ಗೆ ಹತ್ತು ವರ್ಷಗಳಿಂದ ಸರ್ಕಾರ ಮತ್ತು ಸಾರ್ವಜನಿಕರ  ನಿರ್ಲಕ್ಷ್ಯದಿಂದ ಸುಸಜ್ಜಿತ ಕಟ್ಟಡಗಳು ಹಾಳಾಗುತ್ತಿವೆ. ಇನ್ನಾದರೂ ಸರ್ಕಾರ ಇತ್ತ ಕಡೆ ಗಮನ ಹರಿಸದೇ ಹೋದರೆ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡಗಳು ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆ ಇದೆ.ರೈತ ವಿದ್ಯಾರ್ಥಿಗಳಿಗೆ ಕೊಠಡಿಯ ಸೌಕರ್ಯವಿಲ್ಲದಿರುವುದರಿಂದ  ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ನಂತರ ಸರ್ಕಾರದಿಂದ 1990ರಲ್ಲಿ ಕೃಷಿ ಅಭಿವೃದ್ಧಿ ಕೇಂದ್ರದಲ್ಲಿ 250ಎಕರೆ ವಿಸ್ತೀರ್ಣದ ಮಧ್ಯದಲ್ಲಿ  ರಾಜ್ಯ ಹೆದ್ದಾರಿ 65, ಮಲ್ಪೆ-ಮಳಕಾಲ್ಮೂರು ರಸ್ತೆ ಹಾದು ಹೋಗಿರುವುದರಿಂದ ಒಂದು ಭಾಗದಲ್ಲಿ 190ಎಕರೆ ಮತ್ತೊಂದು ಕಡೆ 40 ಎಕರೆಯ ಎರಡು ವಿಭಾಗವಾಗಿದ್ದು, ಇದರ ಒಂದು ಕಡೆಯ 40 ಎಕರೆ ಜಮೀನಿನಲ್ಲಿ  ಸುಸಜ್ಜಿತವಾದ ಎರಡು ಕಟ್ಟಡಗಳನ್ನು 1990ರಲ್ಲಿ ನಿರ್ಮಿಸಲಾಯಿತು. ಕೃಷಿ ಪಾಠಶಾಲೆಯನ್ನು ಆರಂಭಿಸುವ ಮೂಲಕ ರೈತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾರಂಭಿಸಿದರು. ಈ ಕಟ್ಟಡದಲ್ಲಿ ಸುಮಾರು ಹತ್ತು ವರ್ಷಗಳವರೆಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು.

 ಸದ್ಯ ಕೃಷಿ ಪಾಠಶಾಲೆ ಕಟ್ಟಡ ಹಾಳುಬಿದ್ದಿದೆ. ಸರ್ಕಾರವು ಇತ್ತ ಕಣ್ತೆರೆದು ನೋಡಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.