ಹಾವುಗಳ ನಡುವೆ ಶ್ರುತಿ

7

ಹಾವುಗಳ ನಡುವೆ ಶ್ರುತಿ

Published:
Updated:
ಹಾವುಗಳ ನಡುವೆ ಶ್ರುತಿ

ಕುಮಾರ್ ತುರಾಣಿ ನಿರ್ಮಾಣದ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು, ಚಿತ್ರೀಕರಣ ಪುಣೆಯ ಹೊರವಲಯದಲ್ಲಿ ಭರದಿಂದ ಸಾಗಿದೆ.ಸಮೃದ್ಧ ಹಸಿರು ಸಿರಿ ಇರುವ ಕಾಡಿನಲ್ಲಿಯೇ ಸೆಟ್ ನಿರ್ಮಿಸಿ ಚಿತ್ರೀಕರಣಕ್ಕೆ ತಂಡ ಸಿದ್ಧವಾಗಿತ್ತು. ಚಿತ್ರ ನಟಿ ಶ್ರುತಿ ಹಾಸನ್ ಸಹ ಇಲ್ಲಿಯ ಪಾರಿವಾಳಗಳೊಂದಿಗೆ ಸ್ನೇಹ ಸಂಪಾದಿಸಿ, ಖುಷಿಯಾಗಿದ್ದಾರಂತೆ.ಹಾಡಿನ ಚಿತ್ರೀಕರಣ ಆರಂಭಿಸಿದಾಗ ಮಾತ್ರ ಇಡೀ ತಂಡ ಬೆಚ್ಚಿ ಬೀಳುವಂತಾಗಿದೆ. ಶ್ರುತಿ ಹಾಸನ್ ಹುಲ್ಲು ಹಾಸಿನ ಮೇಲೆ ಮಲಗಿ ಹಾಡುವ ದೃಶ್ಯ ಅದು. ಆದರೆ ಕಣ್ಣು ಹಾಯಿಸಿದೆಡೆಯೆಲ್ಲಾ ಹಾವುಗಳು. ಈ ಹಾವುಗಳ ಹಾವಳಿಯನ್ನು ಕಂಡು ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಲಾಯಿತಂತೆ.ಸ್ಥಳೀಯರ ಪ್ರಕಾರ ಇದು ನಾಗಬನವಾಗಿದ್ದು, ಮಳೆಗಾಲದಲ್ಲಿ ಸಾಕಷ್ಟು ಹಾವುಗಳು ಅಲ್ಲಿ ಹರಿದಾಡುತ್ತವಂತೆ. ಇದು ಅದೃಷ್ಟವೋ ದುರದೃಷ್ಟವೋ ಎಂಬ ಚರ್ಚೆ ಸೆಟ್‌ನಲ್ಲಿ ಸಾಗಿದೆಯಂತೆ. ನಿರ್ದೇಶಕ ಪ್ರಭುದೇವ ಮಾತ್ರ, `ಹಾವಿನಿಂದಾಗಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲವಲ್ಲ. ಇದು ಶುಭಲಕ್ಷಣವೇ~ ಎಂದು ಸಕಾರಾತ್ಮಕವಾಗಿ ಎಲ್ಲರಿಗೂ ಧೈರ್ಯ ತುಂಬಿದರಂತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry