ಹಾವೇರಿ ಕೆಜೆಪಿ ಸಮಾವೇಶಕ್ಕೆ ಭರದ ಸಿದ್ಧತೆ

7

ಹಾವೇರಿ ಕೆಜೆಪಿ ಸಮಾವೇಶಕ್ಕೆ ಭರದ ಸಿದ್ಧತೆ

Published:
Updated:

ಚಿಂಚೋಳಿ: ಭಾರತೀಯ ಜನತಾ ಪಕ್ಷಕ್ಕೆ ಗುಡಬೈ ಹೇಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹಾವೇರಿಯಲ್ಲಿ ನಡೆಯಲಿರುವ ನೂತನ ಕರ್ನಾಟಕ ಜನತಾ ಪಕ್ಷದ ನಿರ್ಣಾಯಕ ಸಮಾವೇಶಕ್ಕೆ ಚಿಂಚೋಳಿ ಕ್ಷೇತ್ರದಿಂದ ಕಾರ್ಯಕರ್ತರನ್ನು ಸಂಘಟಿಸಲು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂಪುಟದ ಕ್ಯಾಬಿನೆಟ್ ಸದಸ್ಯರೊಬ್ಬರು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.!ಭಾರತೀಯ ಜನತಾ ಪಕ್ಷದ ತಾಲ್ಲೂಕು ಅಧ್ಯಕ್ಷರನ್ನು ಹೊರತು ಪಡಿಸಿ ಸಚಿವರ ನಿಕಟವರ್ತಿಗಳೊಂದಿಗೆ ಸಮಾಲೋಚಿಸಿ ಕೊಂಚಾವರಂ, ಐನೋಳ್ಳಿ, ಚಿಮ್ಮನಚೋಡ್ ಜಿಲ್ಲಾ ಪಂಚಾಯಿತಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೆಜೆಪಿ ಸಮಾವೇಶಕ್ಕೆ ಕಳುಹಿಸಲು ಸಚಿವರು ಶನಿವಾರದಿಂದ ಸಿದ್ಧತೆ ನಡೆಸುತ್ತಿದ್ದಾರೆ.ಮಾಜಿ ಪ್ರಧಾನಿ ಐ.ಕೆ ಗುಜ್ರಾಲ್ ಅಗಲಿಕೆಯಿಂದ ಸರ್ಕಾರಿ ಕಾರ್ಯಕ್ರಮಗಳಿಲ್ಲದೇ ಬಿಡುವು ದೊರೆತಿರುವುದರಿಂದ ಸಚಿವರು ನೂತನ ಕೆಜೆಪಿಗೆ ಬಲ ನೀಡಲು ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಬಿಜೆಪಿಯ ನಂಬಲರ್ಹ ಮೂಲಗಳು ಮೂಲಗಳು ಪ್ರಜಾವಾಣಿಗೆ ತಿಳಿಸಿವೆ.ಇದೇ ಕ್ಷೇತ್ರದ ಮಾಜಿ ಸಚಿವರೊಬ್ಬರು ಬಿಜೆಪಿಯಲ್ಲಿಯೇ ಉಳಿಯುವ  ಸಾಧ್ಯತೆಗಳು   ಬಹಿರಂಗಗೊಂಡಿದ್ದರಿಂದ ಕಾರ್ಯಕರ್ತರು ಹಾಗೂ ಮುಖಂಡರು ಬಹಿರಂಗವಾಗಿ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದು, ಸದ್ಯ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರದಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಬಸ್ ಕಳುಹಿಸಿ ಕಾರ್ಯಕರ್ತರನ್ನು ಹಾವೇರಿ ಸಮಾವೇಶಕ್ಕೆ ಕರೆದೊಯ್ಯುವ ಚಿಂತನೆ ಸಚಿವರ ಪಾಳೆಯದಲ್ಲಿ ಭರಾಟೆಯಿಂದ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry