ಹಾವೇರಿ ಜಿಲ್ಲಾ ಉತ್ಸವ ಸಮಾರೋಪ

7

ಹಾವೇರಿ ಜಿಲ್ಲಾ ಉತ್ಸವ ಸಮಾರೋಪ

Published:
Updated:

ಹಾವೇರಿ: `ಪ್ರಾಚೀನ ಕಲೆ, ಸಾಹಿತ್ಯದ ಶ್ರೀಮಂತಿಕೆ ಹೊಂದಿರುವ ನಮ್ಮ ದೇಶವನ್ನು ಬಿಟ್ಟು, ಇತಿಹಾಸವೇ ಇಲ್ಲದ ವಿದೇಶಗಳ ಕಡೆಗೆ ಯುವಜನಾಂಗ ಮುಖ ಮಾಡುತ್ತಿರುವುದು ದುರ್ದೈವದ ಸಂಗತಿ~ ಎಂದು ಹಿರಿಯ ಸಾಹಿತಿ ಹಾಗೂ ವಿಧಾನಪರಿಷತ್ ಸದಸ್ಯ ಡಾ.ದೊಡ್ಡರಂಗೇಗೌಡ ಹೇಳಿದರು.ಜಿಲ್ಲೆಯ ಬ್ಯಾಡಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐದನೇ ಜಿಲ್ಲಾ ಉತ್ಸವದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.ಕೇವಲ 600 ವರ್ಷಗಳ ಇತಿಹಾಸ ಹೊಂದಿ ರುವ ಇಂಗ್ಲಿಷ್ ನಾಡಿನಲ್ಲಿ ಆ ಭಾಷೆಯ ಮೊದಲ ಕವಿ ಹುಟ್ಟುವ ಮುನ್ನ ಅಂದರೆ, 5 ಸಾವಿರ ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯದಲ್ಲಿ ಮುನ್ನೂರಕ್ಕೂ ಹೆಚ್ಚು ಕವಿಗಳು ಅತ್ಯದ್ಭುತ ಸಾಹಿತ್ಯ ರಚನೆ ಮಾಡಿದ್ದಾರೆ. ಅವರಲ್ಲಿ ಹತ್ತು ಹನ್ನೆರಡು ಜನರು ಜಗದ್ವಿಖ್ಯಾತ ರಾಗಿದ್ದಾರೆ.ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಸಂದೇಶವನ್ನು ಜಗತ್ತಿಗೆ ನೀಡಿದ ಶ್ರೀಮಂತಿ ಸಂಸ್ಕೃತಿ ನಮ್ಮಲ್ಲಿದೆ ಎಂದರು.ಇಂದಿನ ಯುವ ಜನಾಂಗ ಇದನ್ನು ಅರ್ಥೈಸಿಕೊಳ್ಳದೇ ಎದುರಿನ ಬಾಹ್ಯಾಕರ್ಷಣೆ ಹಾಗೂ ಹಣಕ್ಕಾಗಿ ದೇಶದ ಸಂಸ್ಕೃತಿಯನ್ನು ವಿಕೃತಿ ವಿಕಲ್ಪ ಮಾಡಲಾಗುತ್ತದೆ. ಸಂಸ್ಕೃತಿ ಪುನರುತ್ಥಾನ ಸಾಧ್ಯವಾಗಬೇಕಾದರೆ, ಇರುವ ಸಂಸ್ಕೃತಿಯನ್ನು ಅಪಮೌಲ್ಯವಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.ಪ್ರತಿಭೆಯನ್ನು ಯಾರಿಂದಲೂ ತುಳಿಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಯುವ ಜನರು ಅರ್ಥಮಾಡಿಕೊಂಡು, ಅಕ್ಷರವಂತ, ವಿಚಾರವಂತ ಸಮಾಜ ಕಟ್ಟಲು ಮುಂದಾಗಬೇಕು. ಆಗ ನಾವೇ ಶ್ರೀಮಂತರಾಗುತ್ತೇವೆ ಎಂದ ಅವರು, ಅಮೆರಿಕದ ಒಬಾಮ ಭಾರತದತ್ತ ಸಹಾಯ ಹಸ್ತ ಚಾಚಿದಾಗಲೇ ದೊಡ್ಡಣ್ಣ ಅಮೆರಿಕಕ್ಕಿಂತ ಭಾರತ ಅದಕ್ಕಿಂತ ದೊಡ್ಡ ದೇಶ ಎಂಬುದನ್ನು ದೇಶದ ಯುವ ಜನತೆ ತಿಳಿದುಕೊಳ್ಳಬೇಕಿತ್ತು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ಅತ್ಯಂತ ಯಶಸ್ವಿ ಜಿಲ್ಲಾ ಉತ್ಸವ ಜರುಗಿದ್ದು, ಮುಂದಿನ ವರ್ಷದಿಂದ ನಿರಂತರವಾಗಿ ಪ್ರತಿ ತಾಲ್ಲೂಕಿನಲ್ಲಿ ಜಿಲ್ಲಾ ಉತ್ಸವ ಆಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸ್ಥಳೀಯ ಕಲಾ ಪ್ರತಿಭೆಗಳಿಗೆ ಈ ಮೂಲಕ ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಅರ್ಥ ಮಾಡಿಕೊಳ್ಳಲು ಇಂತಹ ಉತ್ಸವಗಳು ಸಹಾಯಕವಾಗಲಿವೆ ಎಂದು ತಿಳಿಸಿದರು.ಶಾಸಕ ಸುರೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಶಿವಣ್ಣ, ಜಿ.ಪಂ. ಅಧ್ಯಕ್ಷೆ ಗದಿಗೆವ್ವ ಬಸನಗೌಡ್ರ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಜಿ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ.ಅಗಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry