ಹಾಸನ ತಂಡ ಶುಭಾರಂಭ

7
ಸಬ್ ಜೂನಿಯರ್ ರಾಜ್ಯ ನೆಟ್‌ಬಾಲ್

ಹಾಸನ ತಂಡ ಶುಭಾರಂಭ

Published:
Updated:

ಬೆಂಗಳೂರು: ಹಾಸನ ಜಿಲ್ಲಾ ತಂಡ ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ `ಮಹೇಂದ್ರ ಮುನೊಟ್ ಕಪ್ 2012' ಹದಿನಾಲ್ಕನೇ ಸಬ್ ಜೂನಿಯರ್ ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಮೊದಲ ಪಂದ್ಯದಲ್ಲಿ ಗೆಲುವು ಪಡೆದು ಶುಭಾರಂಭ ಮಾಡಿತು.ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಹಾಸನ, ತಂಡ ವಿಭಾಗದ ಸ್ಪರ್ಧೆಯಲ್ಲಿ 16-11ರಲ್ಲಿ ಅರವಿಂದೊ ಪ್ರೌಢಶಾಲೆ ತಂಡವನ್ನು ಮಣಿಸಿತು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಪೊಲೀಸ್ ಕ್ವಾಟ್ರರ್ಸ್ ಹೈಸ್ಕೂಲು ತಂಡ 15-2ರಲ್ಲಿ  ಬೆಳಗಾವಿ ಜಿಲ್ಲಾ ತಂಡದ ಮೇಲೂ, ದಾವಣಗೆರೆ ಜಿಲ್ಲಾ ತಂಡ 12-5ರಲ್ಲಿ ಕೋಲಾರದ ವಿರುದ್ಧವೂ, ಮೈಸೂರು ಜಿಲ್ಲೆಯ ತಂಡ 5-2ರಲ್ಲಿ ವಿದ್ಯಾನಗರದ ಪ್ರೌಢಶಾಲಾ ತಂಡದ ಮೇಲೂ, ಟಿಎನ್‌ಸಿಇಎಸ್ 12-7ರಲ್ಲಿ ತುಮಕೂರು ಜಿಲ್ಲಾ ತಂಡದ ವಿರುದ್ಧವೂ ಜಯ ಸಾಧಿಸಿದವು.ಬಾಲಕಿಯರ ವಿಭಾಗದಲ್ಲಿ ಹೆಗ್ಗನಹಳ್ಳಿಯ ಪ್ರೌಢಶಾಲೆ 10-8ರಲ್ಲಿ ಪೊಲೀಸ್ ಕ್ವಾಟ್ರರ್ಸ್ ಶಾಲಾ ತಂಡದ ಮೇಲೂ, ಐಟಿಐಸಿಇ 6-1ರಲ್ಲಿ ಧಾರವಾಡ ಜಿಲ್ಲಾ ತಂಡದ ಎದುರೂ, ದಾವಣಗೆರೆ 10-4ರಲ್ಲಿ ಸೌಂದರ್ಯಾ ಪ್ರೌಢಶಾಲೆಯ ಮೇಲೂ, ಅರವಿಂದೊ ಶಾಲೆ 13-5ರಲ್ಲಿ ಅನುಪಮಾ ಪ್ರೌಢಶಾಲಾ ತಂಡದ ವಿರುದ್ಧ ಗೆಲುವು ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry