ಭಾನುವಾರ, ಏಪ್ರಿಲ್ 11, 2021
25 °C

ಹಾಸನ, ದ.ಕ: 18 ಗ್ರಾಮ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಆನೆಗಳ ಅಸಹಜ ಸಾವು ಹಾಗೂ ಅವುಗಳ ರಕ್ಷಣೆ ಕುರಿತಂತೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರೋಪಾಯ ಕಂಡುಕೊಳ್ಳಲು ಸರ್ಕಾರ ಆನೆ ಕಾರಿಡಾರ್ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಹಾಸನ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಗ್ರಾಮಗಳನ್ನು ಗುರುತಿಸಿ ಅರಣ್ಯ ಇಲಾಖೆಗೆ ವರ್ಗಾಯಿಸಲು ಅದೇಶ ಹೊರಡಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಕೆಲವು ಗ್ರಾಮಗಳು ಆನೆ ಕಾರಿಡಾರ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದರಲ್ಲಿ ದ.ಕ. ಜಿಲ್ಲೆಯ 18 ಗ್ರಾಮಗಳು ಕಾರಿಡಾರ್‌ಗೆ ಸೇರ್ಪಡೆಯಾಗಲಿವೆ.ವೇದಿಕೆ ಖಂಡನೆ: ಪುಷ್ಪಗಿರಿ ವನ್ಯಧಾಮ ಯೋಜನೆಯ ವಿರುದ್ಧ ತೀವ್ರ ಹೋರಾಟ ನಡೆಸಿ ತಡೆಯುವಲ್ಲಿ ಯಶಸು ಪಡೆದಿರುವ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆನೆ ಕಾರಿಡಾರ್ ವಿರುದ್ಧ ಆಕ್ಷೇಪ ಎತ್ತಿದೆ.ರೈತರಿಗೆ ಯಾವುದೇ ಪ್ಯಾಕೇಜ್ ಘೋಷಿಸದೇ ಏಕಾಏಕಿ ಪ್ರಸ್ತಾವನೆ ಮಾಡಿರುವುದನ್ನು ವೇದಿಕೆ ತೀವ್ರವಾಗಿ ಖಂಡಿಸಿತು. ಕೇವಲ 435 ಮಂದಿ ಸ್ವಇಚ್ಚೆಯಿಂದ ಕೃಷಿ ಭೂಮಿ ಬಿಡಲು ಇಚ್ಚಿಸಿದ್ದಾರೆ. ಈ ಭಾಗದಲ್ಲಿ ಸಾವಿರಾರು ಕುಟುಂಬಗಳು ವಾಸವಾಗಿದೆ. ಅವರ ಅಭಿಪ್ರಾಯ ಕೇಳದೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ವಿಶ್ವಾಸಘಾತಕ ಕ್ರಮ. ಇದರ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಯಿತು.ಜನಜಾಗೃತಿ ಸಭೆ: ಹೋರಾಟದ ಮೊದಲ ಹೆಜ್ಜೆಯಾಗಿ ನವೆಂಬರ್ 5ರಂದು ಐನೆಕಿದು ಶಾಲಾ ವಠಾರದಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಭೆಯ ಸಂಚಾಲಕ ಸತೀಶ್ ಕೂಜುಗೋಡು ತಿಳಿಸಿದ್ದಾರೆ.ಆನೆಕಾರಿಡಾರ್‌ಗೆ ಪ್ರಸ್ತಾಪಿತ ಗ್ರಾಮಗಳು: ಕಳೆದ ವರ್ಷದ ಜುಲೈ 25ರಂದು ನ್ಯಾಯಾಲಯ ನೀಡಿದ ನಿರ್ದೇಶನದಂತೆ ಆನೆ ಕಾರಿಡಾರ್ ರಚಿಸಲು 18 ಗ್ರಾಮಗಳನ್ನು ಅರಣ್ಯ ಇಲಾಖೆಗೆ  ಸೇರಿಸುವ ಪ್ರಸ್ತಾವನೆಯನ್ನು ಆ ಇಲಾಖೆಯು ಕಂದಾಯ ಇಲಾಖೆಗೆ ತಿಳಿಸಿತ್ತು. ಸೂಕ್ತ ಕ್ರಮ ಕೈಗೊಂಡು ಇಲಾಖೆಗೆ ತಿಳಿಸುವಂತೆ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಕಾರಣ ಸಂಬಂಧಿತ ಇಲಾಖೆಗಳು ತರಾತುರಿಯಲ್ಲಿ 18 ಗ್ರಾಮಗಳ ನಕ್ಷೆ  ತಯಾರಿಸಿ ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಲು ಸಜ್ಜಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.