ಹಾಸ್ಟೆಲ್ ಅವ್ಯವಸ್ಥೆ: ಬೀಗ ಜಡಿದು ಪ್ರತಿಭಟನೆ

7

ಹಾಸ್ಟೆಲ್ ಅವ್ಯವಸ್ಥೆ: ಬೀಗ ಜಡಿದು ಪ್ರತಿಭಟನೆ

Published:
Updated:
ಹಾಸ್ಟೆಲ್ ಅವ್ಯವಸ್ಥೆ: ಬೀಗ ಜಡಿದು ಪ್ರತಿಭಟನೆ

ಸಂತೇಬೆನ್ನೂರು: ಸಮೀಪದ ಕೆರೆಬಿಳಚಿ ಗ್ರಾಮದ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ ಆಗರವಾಗಿರುವುದನ್ನು ಕಂಡು ಸಾರ್ವಜನಿಕರು ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಶನಿವಾರ ಶಾಲೆ ಮುಗಿದ ನಂತರ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದರು. ಸೋಮವಾರ ಎಂದಿನಂತೆ ಶಾಲೆಗೆ ಬರಲು ಹಾಸ್ಟೆಲ್‌ಗೆ ಬಂದರೆ ಬೆಳಿಗ್ಗೆ 9.30 ಗಂಟೆಯಾದರೂ ಬೀಗ ತೆಗೆದಿರಲಿಲ್ಲ. ಸಿಬ್ಬಂದಿಯೂ ಇರಲಿಲ್ಲ. ಇದರಿಂದ ದೂರದ ಊರುಗಳಿಂದ ಬಂದ ವಿದ್ಯಾರ್ಥಿನಿಯರು ದಂಗಾದರು.ಇದನ್ನು ಕಂಡ ಗ್ರಾಮದ ಹೈದರ್ ಖಾನ್, ಮಜರ್ ಅಲಿ, ಇಫಿಕಾರ್, ಯಾಹ್ಯಖಾನ್ ಮುಂತಾದವರು ಬೀಗ ಜಡಿದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು.ಶುದ್ಧ ಕುಡಿಯುವ ನೀರಿನ ಕೊರತೆ, ಸೋಲಾರ್ ಬಿಸಿ ನೀರು  ಯಂತ್ರವಿದ್ದರೂ ರಿಪೇರಿ ಕಾಣದೆ ಮಕ್ಕಳು ವಾರಕ್ಕೊಮ್ಮೆ ಮನೆಗೆ ತೆರಳಿ ಸ್ನಾನ ಮಾಡಬೇಕಾದ ಪರಿಸ್ಥಿತಿ, ಶೌಚಗೃಹಗಳ ಪೈಪ್ ಒಡೆದು ದುರ್ವಾಸನೆ.

ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಡೆಸಬೇಕಾಗಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸರಿಪಡಿಸಲು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry