ಸೋಮವಾರ, ಏಪ್ರಿಲ್ 19, 2021
25 °C

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೋರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಪಡೆಯುವ ಭಾಗ್ಯ ಸಿಕ್ಕಿದೆ.ಹಾಸ್ಟೆಲ್‌ನ ನಿಲಯಪಾಲಕ ಎಂ.ಎಸ್.ನಾಗರಾಜ್ ಅವರ ಪ್ರಯತ್ನದ ಫಲವಾಗಿ 5ರಿಂದ 10ನೇ ತರಗತಿ ವರೆಗೆ 45 ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಯುತ್ತಿದ್ದಾರೆ. ವಾರ್ಡನ್ ನಾಗರಾಜು ಖುದ್ದು ಕಂಪ್ಯೂಟರ್ ಶಿಕ್ಷಣ ಹೇಳಿಕೊಡುತ್ತಿದ್ದಾರೆ.ಹಾಸ್ಟೆಲ್‌ನಲ್ಲಿರುವ 4 ಕಂಪ್ಯೂಟರ್‌ಗಳನ್ನು ಬಳಸಿ ಬೇಸಿಕ್ ಕಲಿಸಲಾಗುತ್ತಿದೆ. ಶಾಲೆ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಸಂಜೆ ಒಂದೂವರೆ ತಾಸು ಕಂಪ್ಯೂಟರ್ ಹೇಳಿಕೊಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿ ಆತ್ಮವಿಶ್ವಾಸದಿಂದ ಕಂಪ್ಯೂಟರ್ ಬಳಸುವಂತೆ ಪ್ರೇರೇಪಿಸಲಾಗುತ್ತಿದ್ದು, ಮುಕ್ತ ಅವಕಾಶ ನೀಡಲಾಗಿದೆ. ಕಂಪ್ಯೂಟರ್ ಜತೆಗೆ ಪ್ರತಿ ದಿನ ಮುಂಜಾನೆ ಒಂದೂವರೆ ತಾಸು ಯೋಗ ಕಲಿಸಲಾಗುತ್ತಿದೆ.  ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಶಕ್ತಿ ವೃದ್ಧಿಸಲು ಯೋಗ ಹೇಳಿಕೊಡುತ್ತಿದ್ದೇವೆ. ಯೋಗ ಶಿಕ್ಷಕ ಕೆ.ಶೆಟ್ಟಹಳ್ಳಿ ಅಪ್ಪಾಜಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಯೋಗ ಕಲಿಸಿಕೊಡುತ್ತಿದ್ದಾರೆ.ನಾಲ್ಕು ಮಂದಿ ಅತಿಥಿ ಶಿಕ್ಷಕರಿದ್ದು, ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪಾಠ ಹೇಳಿಕೊಡುತ್ತಿದ್ದಾರೆ. ಮನೆಯಲ್ಲಿ ಕೊಡುವ ಊಟದ ಮಾದರಿಯಲ್ಲಿ ಮೆನು ತಯಾರಿಸಲಾಗಿದೆ.ವಸತಿ ನಿಲಯ ಆವರಣದಲ್ಲಿ 20ಕ್ಕೂ ಹೆಚ್ಚು ಸಿಲ್ವರ್ ಮರಗಳು, ಹೂವಿನ ಗಿಡಗಳು, ಬಾಳೆ, ಕರಿಬೇವು ಗಿಡಗಳನ್ನು ಬೆಳೆಸುವ ಮೂಲಕ ನಾಗರಾಜ್, ತಮ್ಮ ಪರಿಸರ ಪ್ರೇಮ ಮೆರೆದಿದ್ದಾರೆ. ಇದೊಂದು ಮಾದರಿ ವಿದ್ಯಾರ್ಥಿ ನಿಲಯವಾಗಿ ರೂಪುಗೊಳ್ಳುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.