ಗುರುವಾರ , ನವೆಂಬರ್ 21, 2019
21 °C

ಹಾಸ್ಯಮಯ ಚಿತ್ರದಲ್ಲಿ ಸೈಫ್

Published:
Updated:

ಹಾಸ್ಯಮಯ ರೊಮ್ಯಾಂಟಿಕ್ ಚಿತ್ರವೊಂದರ ಸಿದ್ಧತೆಯಲ್ಲಿ ಸೈಫ್ ಅಲಿ ಖಾನ್ ನಿರತರಾಗಿದ್ದಾರೆ. ರಾಜ್ ನಿದಿಮೋರು ಹಾಗೂ ಡಿ.ಕೆ. ಕೃಷ್ಣ ಅವರ ಜಂಟಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರದಲ್ಲಿ ಸೈಫ್ ನಾಯಕ ಹಾಗೂ ನಿರ್ಮಾಪಕ ಎರಡೂ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.`ಕಲ್ ಹೋ ನಾ ಹೋ', `ಹಮ್ ತುಮ್', `ಸಲಾಮ್ ನಮಸ್ತೆ', `ಲವ್ ಆಜ್‌ಕಲ್' ಸೇರಿದಂತೆ ಉತ್ತಮ ರೊಮ್ಯಾಂಟಿಕ್ ಚಿತ್ರಗಳನ್ನು ನೀಡಿರುವ ಸೈಫ್, ಈಗಾಗಲೇ ಈ ಸೆಟ್ಟೇರದ ಚಿತ್ರದ ಕಥೆ ಆಲಿಸುವಲ್ಲಿ ನಿರತರಾಗಿದ್ದಾರಂತೆ. ನಿದಿಮೊರು ಹಾಗೂ ಕೃಷ್ಣ ಅವರೊಂದಿಗೆ ಸೈಫ್‌ಗೆ ಇದು ಎರಡನೇ ಚಿತ್ರ. ಈ ಮೊದಲು `ಗೋ ಗೋವಾ ಗಾನ್' ಎಂಬ ಚಿತ್ರದಲ್ಲಿ ನಟಿಸಿದ್ದು, ಅದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.ಅದೇ ಉತ್ಸಾಹದಲ್ಲಿ ಮತ್ತೊಂದು ಚಿತ್ರಕ್ಕೆ ಕೈಹಾಕಿರುವ ಈ ತಂಡ ಈ ಬಾರಿ ಪ್ರೇಮ ಹಾಗೂ ಹಾಸ್ಯವನ್ನು ನವಿರಾಗಿ ಬೆರೆಸುವ ಇರಾದೆ ಹೊಂದಿದೆ. ಈಗ ತೆರೆ ಕಾಣಬೇಕಿರುವ `ಗೋ ಗೋವಾ ಗಾನ್' ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾಗಿರುವ ಈ ಚಿತ್ರದ ಕಥೆಯ ಎಳೆಯೇ ಸೊಗಸಾಗಿದೆ ಎಂದು ತಂಡ ಹೇಳಿಕೊಂಡಿದೆ.

ಪ್ರತಿಕ್ರಿಯಿಸಿ (+)