ಹಾಸ್ಯ ನಟ ಜಗತಿ ಶ್ರೀಕುಮಾರ್ ಚೇತರಿಕೆ

7

ಹಾಸ್ಯ ನಟ ಜಗತಿ ಶ್ರೀಕುಮಾರ್ ಚೇತರಿಕೆ

Published:
Updated:

ತಿರುವನಂತಪುರ (ಐಎಎನ್‌ಎಸ್): ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಜಗತಿ ಶ್ರೀಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವ್ಯೆದ್ಯರು ತಿಳಿಸಿದ್ದಾರೆ.`ನಟ ಜಗತಿ ಶ್ರೀಕುಮಾರ್ ಅವರು ಹಲವು ಬಗೆಯ ಚಿಕಿತ್ಸೆಗಳಿಗೆ ಸ್ಪಂಧಿಸಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇನ್ನು ಮೂರು ವಾರಗಳಲ್ಲಿಯೇ ಮಾತನಾಡುವ ಬಗ್ಗೆ ನಿರೀಕ್ಷೆ ಮಾಡಲಾಗಿದೆ ಎಂದು ವೈದ್ಯರು ನನಗೆ ಹೇಳಿದ್ದಾರೆ' ಎಂದು ಜಗತಿ ಅವರ ಸಂಬಂಧಿ ಪಿ.ಸಿ. ಜಾರ್ಜ್ ಅವರು ಶನಿವಾರ ತಿಳಿಸಿದ್ದಾರೆ.ಜಗತಿ ಅವರನ್ನು ಈಗಾಗಲೇ ನಾಲ್ಕು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅವರು ಪೂರ್ಣವಾಗಿ ಗುಣಮುಖವಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.62 ವರ್ಷದ ನಟ ಜಗತಿ ಶ್ರೀಕುಮಾರ್ ಅವರು ಮಾರ್ಚ್ 10ರಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ತ್ರಿಶೂರ್‌ನಿಂದ ಕೊಡಗಿಗೆ ಇನ್ನೋವಾ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯ ಕೋಯಿಕ್ಕೋಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಮುಂಜಾನೆ ಕಾರು ರಸ್ತೆ ಅಪಘಾತಕ್ಕೆ ಒಳಗಾಗಿತ್ತು. ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry