ಹಾಸ್ಯ ನಾಟಕ `ತೃಪ್ತಿ@ 60/-'

7

ಹಾಸ್ಯ ನಾಟಕ `ತೃಪ್ತಿ@ 60/-'

Published:
Updated:

ಹೊಸವರ್ಷವನ್ನು ನಗುಮೊಗದಿಂದ ಸ್ವಾಗತಿಸುವ ಆಸೆ ನಿಮಗಿದೆಯೇ? ಹಾಗಿದ್ದರೆ, ಇದೇ 29ರಂದು ಪ್ರದರ್ಶನಗೊಳ್ಳಲಿರುವ `ತೃಪ್ತಿ@ 60/-' ಹಾಸ್ಯ ನಾಟಕವನ್ನು ಮನೆಮಂದಿ ಜತೆಗೂಡಿ ವೀಕ್ಷಿಸಿ ಹೊಸವರ್ಷಕ್ಕೆ ನಗುವಿನ ಸ್ವಾಗತ ಕೋರಬಹುದು. `ತೃಪ್ತಿ@ 60/-' ನಾಟಕದ ಹೆಸರೇ ವಿಚಿತ್ರವಾಗಿದೆಯಲ್ಲವೇ? ಹೌದು. ಇಲ್ಲಿ 60 ರೂಪಾಯಿಗೆ ಪ್ರೇಕ್ಷಕರಿಗೆ ಭರಪೂರ ತೃಪ್ತಿ ಸಿಗುತ್ತದೆ.

ನಾಟಕದಲ್ಲಿ ಬರುವ ಪ್ರಮುಖ ಪಾತ್ರಧಾರಿ ಅಡುಗೆ ಭಟ್ಟ `ತೃಪ್ತಿ' ಮನೆಮಂದಿಗೆಲ್ಲಾ ರುಚಿರುಚಿಯಾದ ಊಟ, ಸಿಹಿ ಮಾತು ಬಡಿಸಿ ಎಲ್ಲರನ್ನೂ ತೃಪ್ತಿ ಪಡಿಸುತ್ತಾ ತಾನೂ ತೃಪ್ತಿಪಡುವ ವ್ಯಕ್ತಿ.ನಾಟಕದಲ್ಲಿ ಒಂದು ವಿಚಿತ್ರ ಸಂಸಾರದ ಕತೆ ಇದೆ. ಆ ಮನೆಯ ಸದಸ್ಯರಲ್ಲಿ ಮುಖ್ಯವಾಗಿ ಹಿರಿಯರಿಗೆ ಆದ್ಯತೆ ಇಲ್ಲ. ಹಿರಿಮಗ ಸಾಫ್ಟ್‌ವೇರ್ ಎಂಜಿನಿಯರ್. ಅವನು ಸಿಕ್ಕಾಪಟ್ಟೆ ಬ್ಯುಸಿ. ಇನ್ನು ಹಿರಿ ಸೊಸೆ ಕಾಲ್ ಸೆಂಟರ್ ಉದ್ಯೋಗಿ. ಕೆಲಸದಲ್ಲಿರುವ ಆಕೆ ಗಂಡನ ಮುಖ ನೋಡಿಯೇ ಎಷ್ಟೊ ದಿನಗಳಾಗಿವೆ. ಎರಡನೆ ಮಗನಂತೂ ವಾರಕ್ಕೊಂದು ಬಿಸಿನೆಸ್‌ಗೆ ತಲೆ ಹಾಕಿ ಕೈ ಸುಟ್ಟುಕೊಳ್ಳುವ ಪೈಕಿ. ಕೊನೆ ಮಗ ಪಿಯುಸಿ ಪಾಸ್ ಆಗಲು ಪಂಚ ವಾರ್ಷಿಕ ಯೋಜನೆಯನ್ನೇ ಬಲವಾಗಿ ನಂಬಿಕೊಂಡಿದ್ದಾನೆ.ಹೀಗಿರುವ ವಿಚಿತ್ರ ಕುಟುಂಬಕ್ಕೆ ರುಚಿ, ಅಭಿರುಚಿ ಬಡಿಸುವ ಭಟ್ಟನೇ ಈ ಮನೆಯ ಹೀರೊ. ಇವನ ಚುರುಕು ಮಾತು, ಹಾಸ್ಯ ಮನೋಭಾವ ಮತ್ತು ಸಾಮಾಜಕ್ಕೆ ಸಂದೇಶ ನೀಡುವ ಸಾಮರ್ಥ್ಯ ಇವೆಲ್ಲವನ್ನೂ ನೋಡಿದರೆ ಇವನನ್ನು ಪಾದರಸ ಎಂದೆನೆಬಹುದು. ಉಳಿದ ಕುತೂಹಲಕಾರಿ ಸಂಗತಿಗಳು ಹಾಗೂ ಕಚಗುಳಿ ಇಡುವ ಸಂಭಾಷಣೆಯನ್ನು ರಂಗ ಮೇಲೆ ಕಣ್ತುಂಬಿಕೊಳ್ಳಬಹುದು. ಅಂದಹಾಗೆ, ನಾಟಕವನ್ನು ಎಂ.ಆರ್. ಶ್ರೀನಾಥ್ ನಿರ್ದೇಶನ ಮಾಡಿದ್ದಾರೆ. ಕಥೆ, ಸಂಭಾಷಣೆ ಕೂಡ ಅವರದ್ದೇ.

ಸ್ಥಳ: ಕೆ.ಎಚ್.ಕಲಾಸೌಧ, ಹನುಮಂತನಗರ. ಸಂಜೆ 7. ಟಿಕೆಟ್-60 ರೂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry