ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

7

ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

Published:
Updated:

ನವದೆಹಲಿ: ಕೇಂದ್ರ ಸರ್ಕಾರ 2011-12ನೇ ಸಾಲಿನ ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೊಷಣೆ ಮಾಡಿದ್ದು, ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.ಈ ಬೆಳೆಗಳು 2012-13ನೇ ಸಾಲಿಗೆ ಮಾರುಕಟ್ಟೆಗೆ ಬರಲಿದೆ. ಗೋದಿಗೆ ಕನಿಷ್ಠ ಬೆಂಬಲ ಬೆಲೆ 165 ರೂಪಾಯಿ ಹೆಚ್ಚಳ ಮಾಡಿದ್ದು, ಕ್ವಿಂಟಾಲ್‌ಗೆ 1285 ರೂಪಾಯಿ ನಿಗದಿ ಮಾಡಿದೆ.ಬಾರ್ಲಿಯ ಬೆಂಬಲ ಬೆಲೆಯನ್ನು ಇನ್ನೂರು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 980 ರೂಪಾಯಿ ನಿಗದಿಯಾಗಿದೆ. ಹಾಗಯೆ ಹುರಳಿ, ಬೇಳೆಕಾಳುಗಳ, ಸಾಸಿವೆಗೂ ಕನಿಷ್ಠ ಬೆಂಬಲ ಬಲೆ ಹೆಚ್ಚಳ ಮಾಡಲಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯ ಆರ್ಥಿಕ ವಿಚಾರಗಳ ಮೇಲಿನ ಸಂಪುಟ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಹಿಂಗಾರು ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ದೀಪಾವಳಿಗೆ ಸರ್ಕಾರ ರೈತರಿಗೆ ನೀಡಿರುವ ಕೊಡುಗೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಬಣ್ಣಿಸಿದ್ದಾರೆ.ಬಾರ್ಲಿಯ ಬೆಂಬಲ ಬೆಲೆಯನ್ನು ಇನ್ನೂರು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 980 ರೂಪಾಯಿ ನಿಗದಿಯಾಗಿದೆ. ಹಾಗಯೆ ಹುರಳಿ, ಬೇಳೆಕಾಳುಗಳ, ಸಾಸಿವೆಗೂ ಕನಿಷ್ಠ ಬೆಂಬಲ ಬಲೆ ಹೆಚ್ಚಳ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry