ಶನಿವಾರ, ಅಕ್ಟೋಬರ್ 19, 2019
28 °C

ಹಿಂಗುಲಾಂಬಿಕ ದೇವಾಲಯದಲ್ಲಿ ಬೆಳ್ಳಿ ಮತ್ತು ಬಂಗಾರ ತಾಳಿ ಕಳವು

Published:
Updated:

ಸೇಡಂ: ಭಾನುವಾರ ರಾತ್ರಿ 10 ರ ಸುಮಾರಿಗೆ ಕಳ್ಳರು ಪಟ್ಟಣದ ಶ್ರೀ ಹಿಂಗುಲಾಂಬಿಕ ದೇವಾಲಯದ ಗರ್ಭಗುಡಿ ಬಾಗಿಲಿನ ಕೀಲಿ ಮುರಿದು 1500 ಗ್ರಾಮ (1.5 ಕಿಲೋ) ಬೆಳ್ಳಿ ಕಿರಟ, ದೇವಿಗೆ ಹಾಕಿರುವ 6 ಬಂಗಾರ ತಾಳಿ, ನತ್ತು ಸೇರಿದಂತೆ 20 ಗ್ರಾಮ ಬಂಗಾರ ಕಳ್ಳತನವಾಗಿರುವುದು ತಿಳಿದು ಬಂದಿದೆ.ಅಮೂಲ್ಯವಾದ ವಸ್ತುಗಳನ್ನು ಕಳವು ಮಾಡಿದ ಕಳ್ಳರು ದೇವಿಯ `ತ್ರಿಶೂಲ~ ವನ್ನು ಮುಖ್ಯರಸ್ತೆ ಬಳಿ ಎಸೆದು ಹೋಗಿದ್ದ ಪರಿಣಾಮ ಅರ್ಧ ಗಂಟೆ ಒಳಗೆ ವಿಷಯ ತಿಳಿದ ದೇವಾಲಯದ ಆಡಳಿತ ಮಂಡಳಿ ಸದಸ್ಯರು ದೇವಾಲಯಕ್ಕೆ ಆಗಮಿಸಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದಾಗ ತಕ್ಷಣವೇ ಆಗಮಿಸಿ ಮುಂದಿನ ಕ್ರಮ ಕೈಕೊಂಡರು. ಸ್ಥಳಕ್ಕೆ ಪಿಎಸ್‌ಐ ರಾಜಶೇಖರ ಹಳೆಗೋಧಿ ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣ  ವನ್ನು ದಾಖಲಿಸಿಕೊಂಡಿದ್ದಾರೆ.

Post Comments (+)