ಬುಧವಾರ, ಜೂನ್ 16, 2021
23 °C
ಭಾರಿ ಮಳೆ–ಗಾಳಿಗೆ ಅಪಾರ ನಷ್ಟ

ಹಿಂಡಸಹಳ್ಳಿ ಗ್ರಾಮಕ್ಕೆ ಶಾಸಕ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಮಾರ್ಚ್‌ 3ರ ಸೋಮವಾರ ರಾತ್ರಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಹತ್ತಾರು ಮನೆಗಳು, 50ಕ್ಕೂ ಹೆಚ್ಚು ತೆಂಗಿನ ಮರಗಳು, ಅಪಾರ ಪ್ರಮಾಣದ ದವಸ ಧಾನ್ಯಗಳು ಹಾನಿಯಾಗಿ ಸಂಕಷ್ಟ­ಕ್ಕೀಡಾಗಿರುವ ತಾಲ್ಲೂಕಿನ ಹೊಣಕೆರೆ ಹೋಬಳಿ ಹಿಂಡಸಹಳ್ಳಿ ಗ್ರಾಮ ಕಳೆದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಗ್ಗತ್ತಲಲ್ಲಿ ಮುಳುಗಿದೆ.



ತಾಲೂಕಿನ ಗಡಿಭಾಗದಲ್ಲಿ ಪ್ರಕೃತಿ ವಿಕೋಪಕ್ಕೊಳಗಾಗಿರುವ ಹಿಂಡಸಹಳ್ಳಿ ಗ್ರಾಮಕ್ಕೆ ಶಾಸಕ ಎನ್. ಚಲುವರಾಯ­ಸ್ವಾಮಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.



ತೆಂಗಿನ ತೋಟಗಳನ್ನು ವೀಕ್ಷಿಸಿದ ಚಲುವರಾಯ­ಸ್ವಾಮಿ, ಬೇಸಿಗೆ ಕಾಲದಲ್ಲಿ ಸುರಿದಿರುವ ಅಕಾಲಿಕ ಮಳೆ­ಯಿಂದಾಗಿ ಗ್ರಾಮದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ತೆಂಗಿನ ಮರಗಳು, ಹಲಸಿನ ಮರಗಳು, ತರಕಾರಿ ಬೆಳೆಗಳು ಹಾನಿಯಾಗಿ­ರುವುದನ್ನು ನೋಡಿದರೆ, ಒಂದೆಡೆ ಮಳೆಯಾಯಿತಲ್ಲ ಎಂಬ ಸಂತೋಷ­ವಾದರೆ ಮತ್ತೊಂದೆಡೆ ಪ್ರಕೃತಿ ವಿಕೋಪಕ್ಕೆ ಸಿಲುಕಿ  ರೈತರು ತೊಂದರೆಗೆ ಸಿಲುಕಿದರೆಂಬ ಆತಂಕ ಕಾಡುತ್ತಿದೆ.



ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳು ನೀಡುವ ಪರಿಹಾರ ಧನವನ್ನು ಸಂಭವಿಸಿರುವ ನಷ್ಟಕ್ಕೆ ಹೋಲಿಕೆ ಮಾಡಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಜಿಲ್ಲಾಧಿಕಾರಿಗಳ ಮೂಲಕ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಕೊಡಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.