ಸೋಮವಾರ, ಏಪ್ರಿಲ್ 12, 2021
26 °C

ಹಿಂದಿನ ಶತಕಗಳೇ ಸ್ಫೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ವೀರೇಂದ್ರ ಸೆಹ್ವಾಗ್ ಮೊಟೇರಾ ಕ್ರೀಡಾಂಗಣದಲ್ಲಿ ಗುರುವಾರ ಶತಕ ಗಳಿಸಿದ್ದರ ಹಿಂದಿನ ಗುಟ್ಟೇನು ಗೊತ್ತಾ? ಅವರದ್ದೇ ಶತಕಗಳ ವಿಡಿಯೋ ಸಂಗ್ರಹ.`ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೂ ಹಿಂದಿನ ದಿನ (ಬುಧವಾರ) ರಾತ್ರಿ 11 ಗಂಟೆಯವರೆಗೆ ನಾನು ಹಿಂದಿನ ಪಂದ್ಯಗಳ ವಿಡಿಯೋ ವೀಕ್ಷಿಸಿದ್ದೆ. ಮೊದಲ 10 ಓವರ್‌ಗಳನ್ನು ಚೆನ್ನಾಗಿ ಆಡಿದ್ದಾಗಲೆಲ್ಲಾ ನಾನು ದೊಡ್ಡ ಸ್ಕೋರ್ ಮಾಡಿದ್ದೆ. ಹಾಗಾಗಿ ಅದೇ ತಂತ್ರವನ್ನು ಅಳವಡಿಸಿಕೊಂಡು ಗುರುವಾರ ಆಡಿದೆ. ಯಶಸ್ಸು ಲಭಿಸಿತು~ ಎಂದು ಸೆಹ್ವಾಗ್ ತಮ್ಮ ಶತಕಕ್ಕೆ ಸ್ಫೂರ್ತಿಯಾದ ವಿಷಯವನ್ನು ಬಹಿರಂಗಪಡಿಸಿದರು.`ಅದಕ್ಕಾಗಿ ತಂಡದ ವಿಡಿಯೋ ವಿಶ್ಲೇಷಕ ಧನಂಜಯ್ ಅವರಿಗೆ ಧನ್ಯವಾದ ಹೇಳಬೇಕು. ಏಕೆಂದರೆ ಅವರು ಹಿಂದಿನ ಹತ್ತು ಪಂದ್ಯಗಳ ವಿಡಿಯೋ ನೀಡಿದ್ದರು~ ಎಂದರು.ತುಂಬಾ ದಿನಗಳ ಬಳಿಕ ಶತಕ ಗಳಿಸಿದ್ದೇನೆ. ಇದು ಉತ್ತಮ ಸಂದರ್ಭದಲ್ಲಿಯೇ ಬಂದಿದೆ. ಈಗ ನಾವು ಉತ್ತಮ ಸ್ಥಿತಿಯಲ್ದ್ದ್‌ದೇವೆ. ಮತ್ತಷ್ಟು ರನ್ ಸೇರಿಸಿ ಎದುರಾಳಿ ಮೇಲೆ ಒತ್ತಡ ಹೇರುವ ಬಗ್ಗೆ ಯೋಜನೆ ರೂಪಿಸುತ್ತೇವೆ~ ಎಂದು ವೀರೂ ನುಡಿದರು.ಇದು ಬಾಂಗ್ಲಾ ತಂಡವಲ್ಲ: `ಈಗಲೇ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಈ ತಂಡವೇನು ಬಾಂಗ್ಲಾದೇಶದ ರೀತಿ ಅಲ್ಲ. ಇಂಗ್ಲೆಂಡ್ ಈಗ 2ನೇ ರ‌್ಯಾಂಕ್‌ನಲ್ಲಿದೆ. ಹಾಗಾಗಿ ಪ್ರವಾಸಿ ತಂಡದ 20 ವಿಕೆಟ್ ಪಡೆಯಲು ನಾವು ಸಾಕಷ್ಟು ಶ್ರಮ ಪಡಬೇಕು~ ಎಂದರು.`ಈ ಪಿಚ್ ಖಂಡಿತ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಪಿಚ್‌ನಲ್ಲಿ ತಿರುವು ಲಭಿಸುತ್ತಿದೆ. ಎರಡು ಹಾಗೂ ಮೂರನೇ ದಿನದ ಬಳಿಕ ಬ್ಯಾಟ್ ಮಾಡಲು ತುಂಬಾ ಕಷ್ಟವಾಗುತ್ತದೆ. ತುಂಬಾ ತಾಳ್ಮೆ ವಹಿಸಿ ಆಡಬೇಕಾಗುತ್ತದೆ. ಚೇತೇಶ್ವರ ಪೂಜಾರ ಚೆನ್ನಾಗಿಯೇ ಆಡುತ್ತಿದ್ದಾರೆ~ ಎಂದೂ ಸೆಹ್ವಾಗ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.