ಹಿಂದಿಯನ್ನು ದ್ವೇಷಿಸುವುದು ಬೇಡ

7

ಹಿಂದಿಯನ್ನು ದ್ವೇಷಿಸುವುದು ಬೇಡ

Published:
Updated:

‘ರಾಷ್ಟ್ರೀಯತೆಗೆ ಹಿಂದಿಯೇ ಬೇಕಿಲ್ಲ’ ಕಲ್ಯಾಣ ರಾಮನ್ (ವಾವಾ ಡಿ. 31) ಅವರ ಪತ್ರಕ್ಕೆ  ಪ್ರತಿಕ್ರಿಯೆ. ಭಾರತ ನಮ್ಮ ರಾಷ್ಟ್ರ, ನಾವೆಲ್ಲ ಬೇರೆ ಬೇರೆ ರಾಜ್ಯದವರಾದರೂ ಒಂದೇ ರಾಷ್ಟ್ರಕ್ಕೆ ಸೇರಿದವರು. ನಾವೆಲ್ಲ ಭಾರತೀಯರು ಎಂಬ ಮನೋಭಾವನೆ ಇದ್ದರೆ, ಹಿಂದಿ ಏಕೆ ನಮ್ಮ ರಾಷ್ಟ್ರಭಾಷೆ ಆಗಬೇಕು ಎಂಬುದರ ಬಗ್ಗೆ ತಿಳಿಯುತ್ತದೆ. ಹಿಂದಿ ಬರದೆ ಇದ್ದರೆ ಕರ್ನಾಟಕ ಬಿಟ್ಟು ಉತ್ತರಭಾರತದ ಕಡೆಗೆ ಹೋದರೆ ಜೀವಿಸುವುದು, ಹೊಂದಿಕೊಳ್ಳುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ.

ರಾಜ್ಯ ಎಂದಾಗ ನಮ್ಮ ನಮ್ಮ ಭಾಷೆ ಇದ್ದೇ ಇದೆ. ಆದರೆ ರಾಷ್ಟ್ರ ಎಂಬ ವಿಶಾಲ ಅರ್ಥ ಬರಲು ರಾಷ್ಟ್ರಕ್ಕೆ, ಎಲ್ಲಾ ಜನರನ್ನು ಭಾವನಾತ್ಮಕವಾಗಿ ಬಂಧಿಸುವ ಒಂದು ಭಾಷೆ ಬೇಕಲ್ಲ, ಅದೇ ಹಿಂದಿ. ಈ ಕಾರಣದಿಂದಲೇ ರಾಷ್ಟ್ರ ನಾಯಕರು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸಿದ್ದು! ಹಿಂದಿ ಭಾಷೆ ಇರದಿದ್ದರೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಿಸಲು ಆಗುತ್ತಿರಲಿಲ್ಲ. ಭಾಷಾಭಿಮಾನದಿಂದ ಕೆಲಸ ಮಾಡಿಸಿಕೊಳ್ಳುವ ಬಗೆಗೆ ಪತ್ರದಲ್ಲಿ ತಮಿಳುನಾಡನ್ನು ಉದಾಹರಿಸಲಾಗಿದೆ. ಜನ ತಮಗೆ ಇಷ್ಟವಾದ ಸ್ಥಳದಲ್ಲಿ, ಬದುಕನ್ನು ಕಟ್ಟಿಕೊಳ್ಳುವ ಈ ಕಾಲದಲ್ಲಿ ಬಾವಿಯ ಕಪ್ಪೆಯಂತೆ ಇರಲು ಸಾಧ್ಯವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry