ಮಂಗಳವಾರ, ಮೇ 11, 2021
28 °C

ಹಿಂದಿಯ ಶುಕ್ಲ, ಅಮರ್‌ಗೆ ಜ್ಞಾನಪೀಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಹಿಂದಿಯ ಪ್ರಸಿದ್ಧ ಕಾದಂಬರಿಕಾರ ಹಾಗೂ ಲೇಖಕರಾದ ಶ್ರೀಲಾಲ್ ಶುಕ್ಲ ಮತ್ತು ಅಮರ ಕಾಂತ್ ಅವರನ್ನು 2009ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಡಾ. ಸೀತಾಕಾಂತ್ ಮಹಾಪಾತ್ರ ಅಧ್ಯಕ್ಷತೆಯ ಆಯ್ಕೆ ಸಮಿತಿ ಮಂಗಳವಾರ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಪ್ರಕಟಿಸಿತು. ಅದೇ ರೀತಿ 2010ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕದ ಡಾ. ಚಂದ್ರಶೇಖರ ಕಂಬಾರ ಅವರ ಹೆಸರನ್ನು ಅಧಿಕೃತವಾಗಿ ಈ ಸಂದರ್ಭದಲ್ಲಿ ಘೋಷಿಸಲಾಯಿತು.

 

86 ವರ್ಷದ ಅಮರ ಕಾಂತ್ ಅವರ `ಇನಿಹಿನ್ ಹತ್ಯಾರೋಂಸೆ~ ಕೃತಿಗೆ 2007ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಅವರ `ದೋಪಹರ್ ಕಾ ಭೋಜನ್~ ಮತ್ತು `ದೀಪ್ತಿ ಕಲಕ್‌ತಾರಿ~ ಕಿರುಗಥೆಗಳು ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ.ಉತ್ತರ ಪ್ರದೇಶದ 86 ವರ್ಷದ ಕಾದಂಬರಿಕಾರ ಶುಕ್ಲ ಅವರು ರಾಗ ದರ್ಬಾರಿ, ಮಖಾನ್, ಸೂನಿ ಘಾಟಿ ಕಾ ಸೂರಜ್, ಪೆಹ್ಲಾ ಪಡಾವ್ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ. ಸಾಹಿತ್ಯ ಅಕಾಡೆಮಿ ಮತ್ತು ವ್ಯಾಸ ಸಮ್ಮಾನ್ ಪ್ರಶಸ್ತಿಗಳು ಇವರಿಗೆ ದೊರೆತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.