ಹಿಂದುಜಾ ಸಹೋದರರಿಗೆ ಪ್ರಶಸ್ತಿ

7

ಹಿಂದುಜಾ ಸಹೋದರರಿಗೆ ಪ್ರಶಸ್ತಿ

Published:
Updated:

ಲಂಡನ್ (ಪಿಟಿಐ): ಬ್ರಿಟನ್‌ನಲ್ಲಿಯ ಏಷ್ಯಾ ಸಮುದಾಯಕ್ಕೆ ಸಲ್ಲಿಸಿದ ಸೇವೆಗಾಗಿ ಕೋಟ್ಯಧಿಪತಿ ಸಹೋದರರಾದ ಭಾರತ ಮೂಲದ ಶ್ರೀಚಂದ್ ಮತ್ತು ಗೋಪಿಚಂದ್ ಹಿಂದುಜಾ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ನೀಡಲಾಗಿದೆ.ವಾರ್ಷಿಕ ಏಷ್ಯಾ ಸಾಧಕರ ಪ್ರಶಸ್ತಿಯನ್ನು ಅಮೆರಿಕದ ನಾಗರಿಕ ಹಕ್ಕುಗಳ ಕಾರ್ಯಕರ್ತ ಜೆಸ್ಸೆ ಜಾಕ್ಸನ್ ಶನಿವಾರ ಪ್ರದಾನ ಮಾಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿಂದುಜಾ ಸಮೂಹ ಕಂಪೆನಿಯ ಅಧ್ಯಕ್ಷ ಗೋಪಿಚಂದ್ ಹಿಂದುಜಾ, `ಇದೊಂದು ದೊಡ್ಡ ಗೌರವ, ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ ಹಾಗೂ ಏಷ್ಯಾ ಸಮುದಾಯದವರಿಗೆ ಸೇವೆ ಸಲ್ಲಿಸುವುದು ನಮ್ಮ ಧರ್ಮ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry