ಮಂಗಳವಾರ, ಮೇ 24, 2022
25 °C

ಹಿಂದುಳಿದವರ ಅಭಿವೃದ್ಧಿಗೆ ಯೋಜನೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಸರ್ಕಾರ ಹಿಂದುಳಿದವರ ಅಭಿವೃದ್ಧಿಗಾಗಿ  ಹರಿಜನ ಗಿರಿಜನ ಅಭಿವೃದ್ದಿ ಯೋಜನೆಯನ್ನು ಜಾರಿಗೊ ಳಿಸಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ನೀರಾವರಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸೂಚಿಸಿದರು. ಈಚೆಗೆ ಎಪಿಎಂಸಿ ಸಭಾ ಭವನದಲ್ಲಿ ನಡೆದ ನೀರಾವರಿ  ಇಲಾಖಾ ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.‘ಹರಿಜನ ಕೇರಿಯಲ್ಲಿನ ರಸ್ತೆಗಳ ಅಭಿವೃದ್ಧಿ, ಹರಿಜನ ಗಿರಿಜನರ ಜಮೀನಿಗೆ ತೆರಳಲು ರಸ್ತೆ ಹಾಗೂ ನೀರಾವರಿ  ಕಾಲುವೆಗಳ ಸುಧಾರಣೆ ಬಾಂದಾರ ನಿರ್ಮಾಣ, ಹಳ್ಳಗಳಿಗೆ  ಪಂಪಸೆಟ್ ಅಳವಡಿಸುವುದನ್ನು  ಈ ಯೋಜನೆಯಡಿ  ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.‘ಈ ಯೋಜನೆಯಡಿ ನರಗುಂದ ಭಾಗಕ್ಕೆ ರೂ. 7.74 ಲಕ್ಷ, ನರಗುಂದ ಮತಕ್ಷೇತ್ರದ  ರೋಣ ಭಾಗಕ್ಕೆ ರೂ. 9 ಕೋಟಿ ಹಣ ಬಿಡುಗಡೆಯಾಗಿದೆ. ನರಗುಂದ ಹಾಗೂ ರೋಣ ಭಾಗದಲ್ಲಿ ಅಂಬೇಡ್ಕರ ಭವನ ನಿರ್ಮಿಸಲು ರೂ. 30 ಲಕ್ಷ  ಹಾಗೂ ಯಾವಗಲ್ ಗ್ರಾಮದಲ್ಲಿ ವಾಲ್ಷ್ಮೀಕಿ ಭವನ ನಿರ್ಮಾಣಕ್ಕೆ ರೂ. 5 ಲಕ್ಷ ಈ ಯೋಜನೆಯಡಿ ನೀಡಬೇಕು’ ಎಂದರು.

ಸಭೆಯಲ್ಲಿದ್ದ ಮುಖಂಡರ ಬೇಡಿಕೆಯನ್ನು ಆಲಿಸಿ, ರೋಣ  ಹಾಗೂ ನರಗುಂದ ಭಾಗದ ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕೆಳಹಂತದ ಕಾಲುವೆಗಳಿಗೆ ನೀರು ತುಂಬಿಸಬೇಕು. ಇವೆಲ್ಲುವುಗಳಿಗೆ ತಗಲುವ ವೆಚ್ಚದ  ವರದಿಯನ್ನು ಕೂಡಲೇ ಸಿದ್ಧಪಡಿಸಿ ಸಲ್ಲಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.ಕಳೆದ ಬಾರಿ ಹರಿಜನರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಬಂದ ಹಣ ಮರಳಿ ಹೋಗಿದೆ.  ಈ ಸಲ ಹೀಗಾಗದಂತೆ ನೋಡಿಕೊಳ್ಳಬೇಕು. ಇದರ ಬಗ್ಗೆ ಬೇಗನೇ ಕಾರ್ಯ ಪ್ರವೃತ್ತರಾಗುವಂತೆ ನೀರಾವರಿ ಅಧಿಕಾರಿಗಳಿಗೆ  ಸೂಚಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ  ರೈತರ ಭೂಮಿಗೆ ಸರಿಯಾಗಿ ನೀರು ಸರಬರಾಜಿಗೆ ಪಂಪಸೆಟ್ ಅಳವಡಿಸಲು ತಲಾ ಎರಡು ಲಕ್ಷ ರೂಪಾಯಿ ಕಾಯ್ದಿರಿಸಲು ಸೂಚಿಸಿದರು.

ಸಭೆಯಲ್ಲಿ ನೀರಾವರಿ ಕಾರ್ಯನಿರ್ವಾಹಕ ಎಂಜನಿಯರ್ ಎಂ.ಬಿ. ಕೌದಿ, ಕಲ್ಲನಗೌಡ್ರ, ಐಹೊಳೆ, ತಹಸೀಲ್ದಾರ ಎ.ಎಚ್. ಬದಾಮಿ, ಜಿ.ಪಂ. ಸದಸ್ಯ ಎಂ.ಎಸ್. ಪಾಟೀಲ, ತಾ.ಪಂ. ಅಧ್ಯಕ್ಷ ಮಲ್ಲಪ್ಪ ಮೇಟಿ, ಎಸ್.ಬಿ. ಕರಿಗೌಡರ, ಬಿ.ಸಿ. ಬ್ಯಾಳಿ, ಬಿ.ಬಿ. ಐನಾಪುರ, ವಸಂತ ಜೋಗಣ್ಣವರ, ಸಂಗಣ್ಣ ಚವಡಿ ಹಾಗೂ ರೈತ ಮುಖಂಡರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.