ಶನಿವಾರ, ಮೇ 28, 2022
26 °C
`ಲೈಂಗಿಕ ಅಲ್ಪಸಂಖ್ಯಾತರ ಬದುಕು' ವಿಚಾರ ಸಂಕಿರಣ

`ಹಿಂದುಳಿದ ವರ್ಗಕ್ಕೆ ಲೈಂಗಿಕ ಅಲ್ಪಸಂಖ್ಯಾತರೂ ಸೇರಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದಲ್ಲಿ ಎಳು ಸಾವಿರಕ್ಕೂ ಅಧಿಕ ಮಂದಿ ಲೈಂಗಿಕ ಅಲ್ಪಸಂಖ್ಯಾತರಿದ್ದೂ, ಅವರ ಸ್ಥಿತಿ ಶೋಚನೀಯವಾಗಿದೆ' ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ತಿಳಿಸಿದರು.



ಜನಮನದಾಟ ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಲೈಂಗಿಕ ಅಲ್ಪಸಂಖ್ಯಾತರ ಬದುಕು' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.



`ಲೈಂಗಿಕ ಅಲ್ಪಸಂಖ್ಯಾತರನ್ನು ಗುರುತಿಸುವಲ್ಲಿ, ಅವರಿಗೆ ಸ್ಥಾನಮಾನ ನೀಡುವಲ್ಲಿ ಸಮಾಜ ಎಡುವುತ್ತಿದೆ ಹೊರತು ಲೈಂಗಿಕ ಅಲ್ಪಸಂಖ್ಯಾತರಿಂದ ತಪ್ಪು ನಡೆಯುತ್ತಿಲ್ಲ. ಹಾಗಾಗಿ ಕಾನೂನಿಗಿಂತಲೂ ಮಿಗಿಲಾಗಿ  ಸಮಾಜದ ನಡವಳಿಕೆಯಲ್ಲಿ ತಿದ್ದುಪಡಿಯಾಗಬೇಕು' ಎಂದು ಅಭಿಪ್ರಾಯಪಟ್ಟರು.



`ರೇವತಿ ಅವರ `ಬದುಕು ಬಯಲು' ಆತ್ಮಚರಿತ್ರೆ ರೂಪುಗೊಳ್ಳುವ ಸಂದರ್ಭದಲ್ಲಿಯೇ ಹಿಂದುಳಿದ ವರ್ಗಗಳ ಅಡಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಸೇರ್ಪಡೆಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಹಕ್ಕೊತ್ತಾಯಗಳಿರುವ ವರದಿ ಸಿದ್ಧಗೊಂಡಿತು. ಆದರೆ ಸರ್ಕಾರ ಮಾತ್ರ ಈ ವರದಿಯತ್ತ ಗಮನ ಹರಿಸದಿರುವುದು ನಿಜಕ್ಕೂ ಬೇಸರದ ವಿಚಾರ' ಎಂದು ಹೇಳಿದರು.



`ಜಾತಿಯಲ್ಲದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಹಿಂದುಳಿದ ವರ್ಗಗಳಲ್ಲಿ ಸೇರ್ಪಡಿಸುವುದು ಹೇಗೆ? ಎಂದು ತರ್ಕವನ್ನು ಸರ್ಕಾರ ಮುಂದಿಡುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವವರನ್ನು ಹಿಂದುಳಿದ ವರ್ಗಗಳ ಅಡಿಯಲ್ಲಿ ಸೇರ್ಪಡೆ ಮಾಡಲು ಸಾಧ್ಯವಿಲ್ಲವೇ' ಎಂದು ಪ್ರಶ್ನಿಸಿದರು.



ಹಿರಿಯ ರಂಗನಿರ್ದೇಶಕ ಚಿದಂಬರರಾವ್ ಜಂಬೆ, `ಲೈಂಗಿಕ ಅಲ್ಪಸಂಖ್ಯಾತರ ಬದುಕನ್ನು ರಂಗದ ಮೇಲೆ ಮೂಡಿಸುವ ಮೂಲಕ ಅವರ ಕತೆಯನ್ನು ಜನಮನಕ್ಕೆ ಹತ್ತಿರವಾಗುವಂತೆ ಮಾಡುತ್ತಿರುವುದು ಸಂತಸದ ವಿಚಾರ' ಎಂದು ಹರ್ಷ ವ್ಯಕ್ತಪಡಿಸಿದರು. ಎ.ರೇವತಿ ಅವರ ಆತ್ಮಚರಿತ್ರೆ ಆಧರಿಸಿದ ನಾಟಕ ಪ್ರದರ್ಶನಗೊಂಡಿತು. ರಂಗ ನಿರ್ದೇಶಕ ನೀನಾಸಂ ಎಂ.ಗಣೇಶ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.