ಹಿಂದುಳಿದ ವರ್ಗದವರ ಸಂಘಟನೆ ಅಗತ್ಯ

7
ಹಿರಿಯೂರು: ರೇವಣಸಿದ್ದೇಶ್ವರ ಸಮುದಾಯದ ಭವನದ ಉದ್ಘಾಟನಾ ಸಮಾರಂಭ

ಹಿಂದುಳಿದ ವರ್ಗದವರ ಸಂಘಟನೆ ಅಗತ್ಯ

Published:
Updated:
ಹಿಂದುಳಿದ ವರ್ಗದವರ ಸಂಘಟನೆ ಅಗತ್ಯ

ಹಿರಿಯೂರು: ರಾಜ್ಯದಲ್ಲಿ ಶೇ 70ರಷ್ಟು ಇರುವ ಹಿಂದುಳಿದ ವರ್ಗದವರು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರೆ ಮೊದಲು ಸಂಘಟಿತರಾಗಬೇಕು. ಆಗ ಮಾತ್ರ ಸಿದ್ದರಾಮಯ್ಯ ಅವರಂಥವರು ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ 525ನೇ ಜಯಂತ್ಯುತ್ಸವ ಮತ್ತು ರೇವಣಸಿದ್ದೇಶ್ವರ ಸಮುದಾಯದ ಭವನ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.ಸಿದ್ದರಾಮಯ್ಯ ಕೇವಲ ಕುರುಬರ ನಾಯಕರಲ್ಲ. ಎಲ್ಲಾ ಶೋಷಿತ ಸಮುದಾಯಗಳ ನಾಯಕ. ಶೋಷಿತ ವರ್ಗದ ಮಠಗಳಿಗೆ ಅನುದಾನ ನೀಡಬೇಕು ಎಂದು ಹಿಂದುಳಿದ ವರ್ಗಗಳ ಎಲ್ಲ ಸ್ವಾಮೀಜಿಗಳು ಸದಾನಂದಗೌಡ ಅವರಿಗೆ ಒತ್ತಡ ತಂದಿದ್ದರಿಂದ ಬೇರೆ ಮಠಗಳಿಗೂ ಅನುದಾನ ಬಂದಿತು. ರಾಜಕೀಯ ಸಚ್ಛಾರಿತ್ರ್ಯದವರಿಗೆ ಕಷ್ಟ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

ಅಲ್ಪ ಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಸಿಗದಿರುವುದು ವಿಷಾದದ ಸಂಗತಿ ಎಂದು ಅವರು ಹೇಳಿದರು.ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರನ್ನು ಕಡೆಗಣಿಸುವ ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡಬೇಡಿ. ಕಾಂಗ್ರೆಸ್‌ನಿಂದ ಕುರುಬರಿಗೆ ಕನಿಷ್ಠ 30 ಸೀಟು ನೀಡಬೇಕು.

ರಾಜ್ಯದಲ್ಲಿ ಸುಮಾರು 50 ಲಕ್ಷದಷ್ಟಿರುವ ಯಾದವ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಪ್ರಾಮಾಣಿಕರಿಗೆ, ಸಚ್ಚಾರಿತ್ರ್ಯ ಇರುವವರಿಗೆ ರಾಜಕೀಯದಲ್ಲಿ ಮನ್ನಣೆ ಸಿಗಬೇಕಿದೆ ಎಂದು ತಿಳಿಸಿದರು.ಶಾಸಕ ಡಿ. ಸುಧಾಕರ್ ಮಾತನಾಡಿ, ಸಮಾಜಕ್ಕೆ ಕನಕದಾಸರ ಕೊಡುಗೆ ಅಪಾರವಾದುದು. ಕಲುಷಿತ ಸಮಾಜವನ್ನು ಶುದ್ಧಗೊಳಿಸುವ ಕಾಯಕವನ್ನು 500 ವರ್ಷಗಳ ಹಿಂದೆಯೇ ಅವರು ಮಾಡಿದರು. ರಾಜಕೀಯ ಕ್ಷೇತ್ರದ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ಮೂಡಿರುವಾಗ ಸಿದ್ದರಾಮಯ್ಯ ಅವರಂತಹ ವ್ಯಕ್ತಿಗಳು ಸಿಗುವುದು ಅಪರೂಪ ಎಂದರು.ಕನಕದಾಸರ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಶಾಸಕ ಬಂಡೆಪ್ಪ ಕಾಶಂಪೂರ್, ಕನಕದಾಸರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಬುದ್ಧ-ಬಸವ-ಅಂಬೇಡ್ಕರ್ ಅವರು ಅಸಮಾನತೆಯ ವಿರುದ್ಧ ಹೋರಾಟ ನಡೆಸಿದವರು. ಒಂದು ಜಾತಿಯಿಂದ ಎಂಎಲ್‌ಎ ಆಗಲು ಸಾಧ್ಯವಿಲ್ಲ. ಎಲ್ಲಾ ಜನಾಂಗದವರ ಆಶೀರ್ವಾದ ಬೇಕು ಎಂದು ಹೇಳಿದರು.ಮಾಜಿ ಸಂಸತ್ ಸದಸ್ಯ ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಕುರುಬ ಸಮಾಜ ಮೂರನೇ ಸ್ಥಾನದಲ್ಲಿದ್ದು, ಕೇವಲ ಕನಕ ಜಯಂತಿ ಆಚರಿಸಿದರೆ ಸಾಲದು. ಕನಕನ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಬೆಂಗಳೂರು ಮಹಾಪೌರ ಡಿ. ವೆಂಕಟೇಶಮೂರ್ತಿ, ಬೈರತಿಸುರೇಶ್, ಎನ್.ಆರ್. ಲಕ್ಷ್ಮೀಕಾಂತ್, ಮಂಜುಳಾ ವೆಂಕಟೇಶ್, ಎಚ್. ವೆಂಕಟೇಶ್, ಗೋಡೆ ತಿಪ್ಪೇಸ್ವಾಮಿ, ಎಲ್. ತಿಪ್ಪೇಸ್ವಾಮಿ, ಕಂದಿಕೆರೆ ಸುರೇಶ್‌ಬಾಬು, ಮುರುಘರಾಜೇಂದ್ರ ಒಡೆಯರ್, ಕೆ. ದ್ಯಾಮೇಗೌಡ, ಎಚ್. ಚಂದ್ರಪ್ಪ, ಟಿ.ವಿ. ಬಳಿಗಾವಿ,ಟಿ. ರಘುಮೂರ್ತಿ, ಆರ್. ರಾಮಕೃಷ್ಣಪ್ಪ, ಎನ್.ಎಲ್. ಚಂದ್ರಣ್ಣ, ನಿಶಾನಿಜಯಣ್ಣ, ಬಿ. ಮಹಾಂತೇಶ್, ಎಚ್.ಎ. ರುದ್ರಣ್ಣ, ನಾಗಣ್ಣ,ಎಸ್. ಗಿರಿಜಪ್ಪ, ಎಂ. ಮಂಜಣ್ಣ,ಪಿ. ತಿಪ್ಪೇಸ್ವಾಮಿ, ಎಂ.ಎಚ್. ಕೃಷ್ಣಮೂರ್ತಿ, ಎಸ್. ಪ್ರೇಮದಾಸ್, ವಿಶ್ವನಾಥ್, ಎನ್. ಜಯರಾಂ, ಎಚ್.ಆರ್. ಶಿವರುದ್ರಪ್ಪ ಉಪಸ್ಥಿತರಿದ್ದರು. ಧರ್ಮರಾಜ್ ಸ್ವಾಗತಿಸಿದರು. ಮಾಗುದಿ ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry