ಶುಕ್ರವಾರ, ಮೇ 14, 2021
31 °C

ಹಿಂದೂ ವಿವಾಹ ನೋಂದಣಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): ಹಿಂದೂ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವ ಚಿಂತನೆ ನಡೆದಿದೆ ಎಂದು ಬಾಂಗ್ಲಾ ಕಾನೂನು ಸಚಿವ ಶಫೀಕ್ ಅಹ್ಮದ್ ತಿಳಿಸಿದ್ದಾರೆ.ದೇಶದ ವಿವಿಧ ಅಲ್ಪಸಂಖ್ಯಾತ ಸಮುದಾಯ ಸಂಘಟನೆಗಳು ಸಂಘಟಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅಹ್ಮದ್, ಭಾರತದಲ್ಲಿದ್ದಂತೆ ಹಿಂದೂ ಸಮುದಾಯದ ದಂಪತಿಗಳ ಹಕ್ಕುಗಳ ರಕ್ಷಣೆಗಾಗಿ ಸೂಕ್ತ ಕಾನೂನು ತರಲಾಗುತ್ತಿದೆ, ಈ ಕುರಿತು ಈಗಾಗಲೆ ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ.

 

ಆದರೆ ಹೊಸ ವ್ಯವಸ್ಥೆಯಿಂದಾಗಿ ಯಾರದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಅನೇಕ ಸಂದರ್ಭದಲ್ಲಿ ಹಿಂದೂ ಪತ್ನಿಯರು ಗಂಡಂದಿರಿಂದ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾದರೂ ಈಗಿರುವ ಕಾನೂನು ವ್ಯವಸ್ಥೆಯಿಂದಾಗಿ ಸೂಕ್ತ ರಕ್ಷಣೆ ಸಿಗದಂತಾಗಿದೆ ಎಂದು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ಮಾನವ ಹಕ್ಕು ಕಾರ್ಯಕರ್ತೆ ಸುಲ್ತಾನಾ ಕಮಲ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.