ಭಾನುವಾರ, ಮೇ 9, 2021
25 °C

ಹಿಂಸೆಗೆ ತಿರುಗಿದ ಚಿನ್ನಾಭರಣ ವ್ಯಾಪಾರಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿರುವುದರ ವಿರುದ್ಧ ಕಳೆದ ಮೂರು ವಾರಗಳಿಂದ ದೇಶಾದ್ಯಂತ ಚಿನ್ನಾಭರಣ ವ್ಯಾಪಾರಿಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಮುಂಬೈ ಹಾಗೂ ಅಹಮದಾಬಾದ್‌ನಲ್ಲಿ ಪೊಲೀಸರ ಜೊತೆಗೆ ಘರ್ಷಣೆ ಹಾಗೂ ಗಾಜಿಯಾಬಾದ್‌ನಲ್ಲಿ ರೈಲುಗಳ ಸಂಚಾರಕ್ಕೆ ವ್ಯತ್ಯಯ ಉಂಟು ಮಾಡುವುದರೊಂದಿಗೆ ಹಿಂಸೆಗೆ ತಿರುಗಿತು.

ರಾಜಧಾನಿಯ ಜಂತರ್ ಮಂತರ್, ದಕ್ಷಿಣ ಮುಂಬೈಯ ಜವೇರಿ ಬಜಾರ್ ಸೇರಿದಂತೆ ದೇಶಾದ್ಯಂತ ವ್ಯಾಪಿಸಿರುವ ಚಳವಳಿಯು ಮಂಗಳವಾರ ಮುಂಬೈ ಹಾಗೂ ಅಹಮದಾಬಾದ್‌ನಲ್ಲಿ ವ್ಯಾಪಾರಿಗಳು ಮತ್ತು ಪೊಲೀಸರ ನಡುವೆ ಜಟಾಪಟಿಗೆ ತಿರುಗಿದರೆ, ಗಾಜಿಯಾಬಾದ್‌ನಲ್ಲಿ  ರೈಲು ಸಂಚಾರದಲ್ಲಿ ವ್ಯತ್ಯಯ ಉಂಟು ಮಾಡಿತು.ತೆರಿಗೆ ಹೆಚ್ಚಳ ವಿರೋಧಿಸಿ ದೇಶಾದ್ಯಂತ ಬಹುತೇಕ ಚಿನ್ನಾಭರಣ ಮಳಿಗೆಗಳು ಕದ ಮುಚ್ಚಿವೆ.ಅಖಿಲ ಭಾರತ ಚಿನ್ನದ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶೀಲ ಚಂದ ಜೈನ್ ಅವರು `ಕೇಂದ್ರ ಸರ್ಕಾರ ತೆರಿಗೆ ಹೆಚ್ಚಳ ಹಿಂತೆಗೆದುಕೊಳ್ಳುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು~ ಎಂದು ಹೇಳಿದ್ದಾರೆ.`ಚಿನ್ನಾಭರಣಗಳ ಬಹುಬೇಡಿಕೆಯ ಮದುವೆಗಳ ಈ ಋತುವಿನಲ್ಲಿ ತೆರಿಗೆ ಹೆಚ್ಚಳದಿಂದಾಗಿ ಚಿನ್ನ ಮತ್ತು ಬೆಳ್ಳಿ ಆಮದು ಪ್ರಮಾಣ ಕುಸಿತ ಕಂಡಿದೆ, ಎಂದು ದೆಹಲಿಯ ಚಿನ್ನಾಭರಣ ವರ್ತಕರ ಕಲ್ಯಾಣ ವೇದಿಕೆಯ ವಿಜಯ ವರ್ಮಾ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.