ಮಂಗಳವಾರ, ಜನವರಿ 28, 2020
20 °C

ಹಿಗ್ಗಿನ ಮಗ್ಗಿ,ಕುತೂಹಲದ ಭೀಷ್ಮ ಕುರ್ಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆ ಸೈಕಲ್‌ನ ಪೆಡಲ್ ತುಳಿದರೆ ಮುಂದಕ್ಕೆ ಹೋಗುವುದಿಲ್ಲ. ಆದರೆ ಅದಕ್ಕೆ ಅಳವಡಿಸಿದ ಪಂಪ್ 16 ಅಡಿ ಎತ್ತರದವರೆಗೆ ನೀರನ್ನು ಮೇಲಕ್ಕೆ ಎತ್ತುತ್ತದೆ. ಇದು ನಗರದ ಎನ್.ಕೆ. ಠಕ್ಕರ್ ಪ್ರೌಢಶಾಲೆ ವಿದ್ಯಾರ್ಥಿಗಳು ರಚಿಸಿದ ಮಾದರಿ.ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನ ಕೂಡಿಗೆಯ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾ ರ್ಥಿಗಳು ರೂಪಿಸಿದ ಹಸಿರು ನಗರ, ಕಲಘಟಗಿಯ ಜನತಾ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಗಳ ಬಹೂಪ ಯೋಗಿ ರೋಬೋಟ್ ಮಾದರಿ, ಬೂಟು ಪಾಲಿಶ್ ಮಾಡುತ್ತದೆ, ಕರೆಂಟ್ ಇಲ್ಲದಿದ್ದಾಗ ಲೈಟ್ ಹೊತ್ತಿ ಕೊಳ್ಳುತ್ತದೆ.ಇಂಥ ಆಕರ್ಷಕ ವಿಜ್ಞಾನ ಮಾದರಿ ಗಳ ಪ್ರದರ್ಶನ ನಗರದ ನೆಹರು ಮೈದಾನದಲ್ಲಿ ಸೋಮವಾರ ಆರಂಭ ಗೊಂಡಿತು. ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಏರ್ಪಡಿಸಿರುವ `ಜಿಜ್ಞಾಸಾ- 2012~ ರಾಜ್ಯ ಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ 18 ಜಿಲ್ಲೆ ಗಳಿಂದ ಆಗ ಮಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾದರಿಗಳು ಗಮನ ಸೆಳೆಯುತ್ತವೆ.ಕುಂದಗೋಳ ತಾಲ್ಲೂಕಿನ ಸಂಶಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಿಯರು ಗೋಧಿಯ ವಿವಿಧ ತಳಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಹುಬ್ಬಳ್ಳಿಯ ಆನಂದನಗರದ ಎಚ್‌ಪಿಎಸ್ ಪ್ರಾಥ ಮಿಕ ಶಾಲೆಯ ವಿದ್ಯಾರ್ಥಿಗಳ ತಳ ವಿಲ್ಲದ ಬಾವಿ, ಬಾಸೆಲ್ ಮಿಶನ್‌ಗರ್ಲ್ಸ್ ಹೈಸ್ಕೂಲಿನ ವಿದ್ಯಾರ್ಥಿನಿಯರ ಅಮಾವಾಸ್ಯೆ ಹಾಗೂ ಹುಣ್ಣಿಮೆ ಗುರುತಿಸುವ ಮಾದರಿ, ಸದಾಶಿವ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣ, ಋತುಗಳನ್ನು ಪರಿಚಯಿಸುವ ಮಾದರಿ, ಹಗಲು ಮತ್ತು ರಾತ್ರಿ ಹೇಗಾಗುತ್ತವೆ ಎನ್ನುವ ಮಾಹಿತಿ, ಅಣ್ಣಿಗೇರಿಯ ಎಂಸಿಎಸ್ ಪ್ರಾಥಮಿಕ ಶಾಲೆಯ ಗುಣಾ ಕಾರದಲ್ಲಿ ಪಂಚತಂತ್ರಗಳು, ಅಣ್ಣಿ ಗೇರಿಯ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಯಸ್ಸು ಹೇಳುವ ಲೆಕ್ಕಾಚಾರ, ಹಿಗ್ಗಿನ ಮಗ್ಗಿ, ಗುಣಿಸಿದರೆ ಉತ್ತರ ಹೇಳಲೆ?  ಮೊದ ಲಾದವುಗಳ ಕುರಿತು ವಿವರಿಸಿದರು.ಭೀಷ್ಮ ಕುರ್ಚಿ: ಉಣಕಲ್‌ನ ಬಾಸೆಲ್ ಮಿಷನ್ ಶಾಲೆ ಹಾಗೂ ಸದಾ ಶಿವನಗರದ ಉರ್ದು ಹಿರಿಯ ಪ್ರಾಥ ಮಿಕ ಶಾಲೆ ವಿದ್ಯಾರ್ಥಿನಿಯರು `ಭೀಷ್ಮ ಕುರ್ಚಿ~ಯನ್ನು ಸಿದ್ಧಗೊಳಿಸಿದ್ದಾರೆ. ಕುರ್ಚಿ ಮೇಲೆ ಸಮಾನವಾಗಿ ಜೋಡಿ ಸಿದ ಮೊಳೆಗಳಿರುವುದರಿಂದ ಕೂತರೆ ನೋವಾಗುವುದಿಲ್ಲ ಎನ್ನುವ ಸರಳ ಸತ್ಯ ವನ್ನು ಅವರು ತೋರಿಸಿದರು.ಹೃದಯ ಬಡಿತ ದಾಖಲಿಸುವ ಮುದ್ದೇಬಿಹಾಳದ ವಿಬಿಸಿ ಪ್ರೌಢ ಶಾಲೆಯ `ಕಾರ್ಡಿಯೋ ಬೀಟ್~ ಮಾದರಿ ಇಸಿಜಿಯ ಹಾಗಿದೆ. `ಧಾರ ವಾಡ ಬಾಲಬಳಗವು ಮಕ್ಕಳಿಗೆ ಅಕ್ಷರಾ ಭ್ಯಾಸ ಮಾಡಿಸಲು ಪಾಠೋಪಕರಣ, ಕ್ಯಾಲೆಂಡರ್ ತಯಾರಿಕೆ, ಶುಭಾಶಯ ಪತ್ರದ ಜೊತೆಗೆ ಇತರ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ~ ಎಂದು ಅದರ ನೇತೃತ್ವ ವಹಿಸಿಕೊಂಡಿರುವ ಪ್ರತಿಭಾ ಕುಲಕರ್ಣಿ ಹೇಳಿದರು.ಕೊಪ್ಪಳ ಜಿಲ್ಲೆಯ ಮಂಡಲಗಿರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಜೈವಿಕ ಕ್ರಿಮಿನಾಶಕ, ಹುಬ್ಬಳ್ಳಿಯ ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಮಾದರಿ ನಗರ ಮೊದಲಾದವು ಆಸಕ್ತಿ ಕೆರಳಿಸುತ್ತವೆ.`ಮಕ್ಕಳಲ್ಲಿ ಕುತೂಹಲ ಹುಟ್ಟಿಸುವ, ಪ್ರಶ್ನಿಸುವ ಮನೋಭಾವ ಹೆಚ್ಚಿಸುವ ವೈಜ್ಞಾನಿಕ ಮಾದರಿಗಳನ್ನು ಪರಿಚಯಿ ಸುವುದು ಈ ಪ್ರದರ್ಶನ ಉದ್ದೇಶ.  ಬೆಳಿಗ್ಗೆ 9ರಿಂದ ರಾತ್ರಿ 7 ಗಂಟೆಯವರೆಗೆ ವಸ್ತುಪ್ರದರ್ಶನವನ್ನು ವೀಕ್ಷಿಸಬಹುದು~ ಎಂದು ಅಗಸ್ತ್ಯ ಪ್ರತಿಷ್ಠಾನದ ಉತ್ತರ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ನಿತಿನ್ ದೇಸಾಯಿ ತಿಳಿಸಿದರು.ಉದ್ಘಾಟನೆ: ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶ ನವನ್ನು ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವೀರಭದ್ರಪ್ಪ ಹಾಲಹರವಿ, ಮೇಯರ್ ಪೂರ್ಣಾ ಪಾಟೀಲ, ದೇಶಪಾಂಡೆ ಫೌಂಡೇಶನ್ ಸ್ಥಾಪಕ ಗುರುರಾಜ ದೇಶ ಪಾಂಡೆ, ಡಿಡಿಪಿಐ ಕೆ. ಆನಂದ, ಅಗಸ್ತ್ಯ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಾ ಹಕ ಅಜಿತ್ ಬಸು ಮೊದಲಾದವರು ಹಾಜರಿದ್ದರು.

 

ಪ್ರತಿಕ್ರಿಯಿಸಿ (+)