ಶುಕ್ರವಾರ, ಜೂನ್ 25, 2021
26 °C
ವಿದೇಶಗಳಿಂದ ಅಕ್ರಮ ಹಣ ವರ್ಗಾವಣೆ

ಹಿಜ್ಬುಲ್‌ ಮುಖ್ಯಸ್ಥನ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇದೇ ಮೊದಲ ಬಾರಿಗೆ ನಿಷೇಧಿತ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಲುದ್ದೀನ್‌ ಸೇರಿದಂತೆ ಹತ್ತು ಜನರ ವಿರುದ್ಧ ಮಂಗಳವಾರ   ಪ್ರಕರಣ ದಾಖಲಿಸಿದೆ.ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಈ ಹತ್ತೂ ಜನರ ವಿರುದ್ಧ  ಪ್ರಕರಣ ದಾಖಲಾಗಿದೆ. ಅಲ್ಲದೇ ದೇಶದ ವಿವಿಧ ಕಡೆಗಳಲ್ಲಿ ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು  ಮುಟ್ಟುಗೋಲು ಹಾಕಿ­ಕೊ­ಳ್ಳ­­ಲಾಗುವುದು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.ಗಡಿಯಾಚೆಯಿಂದ ದೇಶದೊಳಗೆ   ಅಕ್ರಮವಾಗಿ ಹಣ ಸಾಗಿಸುತ್ತಿರುವ ಸಂಬಂಧ ತನಿಖೆಗೆ ಒಳಗಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.ಗಡಿಯಾಚೆಗಿನ ಭಯೋತ್ಪಾದನಾ ಸಂಘಟನೆಗಳು ದೇಶದಲ್ಲಿ ನಡೆಸುತ್ತಿ­ರುವ ವಿಧ್ವಂಸಕ ಕೃತ್ಯಗಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ  ಇವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಳೆದ ವರ್ಷ ಎಫ್‌ಐಆರ್‌ ದಾಖಲಿಸಿತ್ತು.

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆ­ಸಲು ಪಾಕಿಸ್ತಾನ ಮೂಲದ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ವಿವಿಧ ಮಾರ್ಗಗಳ ಮೂಲಕ  ಅಕ್ರಮವಾಗಿ ಹಣ ಸಾಗಿಸುತ್ತಿದೆ.ಜಮ್ಮು ಮತ್ತು ಕಾಶ್ಮೀರದ ಉಡಿ ವಲಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 13 ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ತನಿಖಾ ದಳ ಎರಡು ವರ್ಷ ಗಳ ಹಿಂದೆ ವಶಪಡಿಸಿಕೊಂಡಿತ್ತು. ಮತ್ತು ಪ್ರಕರಣದ ಸಂಬಂಧ ಮೊಹಮ್ಮದ್‌ ಶಫಿ  ಅಲಿಯಾಸ್‌ ದಾವೂದ್‌ ಹಾಗೂ ತಾಲಿಬ್‌ ಲಾಲಿ ಎಂಬುವರನ್ನು ಬಂಧಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.