ಹಿಟ್ಲರ್ ಬಳಸಿದ್ದ ಕಾರು ಪತ್ತೆ

ಶನಿವಾರ, ಜೂಲೈ 20, 2019
27 °C

ಹಿಟ್ಲರ್ ಬಳಸಿದ್ದ ಕಾರು ಪತ್ತೆ

Published:
Updated:

ಲಂಡನ್ (ಪಿಟಿಐ): ನ್ಯೂಜೆರ್ಸಿಯ ವಾಹನ ಡೀಲರ್ ಒಬ್ಬರು ತಮ್ಮ ಬಳಿ ಇದ್ದ ಹಳೆಯ ಮರ್ಸಿಡಿಸ್ ಕಾರೊಂದಕ್ಕೆ ಬಿಡಿ ಭಾಗಗಳನ್ನು ಖರೀದಿಸಲು ಆನ್ ಲೈನ್ ಮಳಿಗೆಯೊಂದರಲ್ಲಿ ತಡಕಾಡುತ್ತಿದ್ದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು.ತಮ್ಮ ಬಳಿ ಇರುವ ಕಾರು 1942ರಲ್ಲಿ ಹಿಟ್ಲರ್ ಅವರಿಗಾಗಿ  ತಯಾರಿಸಿದ್ದು ಎಂದು ತಿಳಿದಾಗ ಅವರಿಗೆೆ ಅಚ್ಚರಿ!ವಾಹನಗಳ ಡೀಲರ್ ಆಗಿರುವ ಜೆನಪ್ ಟ್ಯುನ್ಸರ್ ಅವರು ಮರ್ಸಿಡಿಸ್ ಮಳಿಗೆಗೆ  ಕರೆ ಮಾಡಿ ತಮ್ಮ ಕಾರಿನ ದುರಸ್ತಿಗೆ ಬಿಡಿ ಭಾಗಗಳಿಗೆ ಬೇಡಿಕೆ ಇಟ್ಟರು.  ಕಾರಿನ ಸೀರಿಯಲ್ ಸಂಖ್ಯೆಯನ್ನು ಕಂಪೆನಿಗೆ ತಿಳಿಸಿದಾಗ ಅಲ್ಲಿಂದ ಬಂದ ಪ್ರತಿಕ್ರಿಯೆ, `ಅದು ಹಿಟ್ಲರ್ ಅವರಿಗೆ ಸೇರಿದ ಕಾರು~ ಎಂದು.  ಆ ಕಾರು ಹಿಟ್ಲರ್‌ಗೆ ಸೇರಿದ್ದು ಎಂಬುದನ್ನು ಮರ್ಸಿಡಿಸ್ ದೃಢಪಡಿಸಿದೆ. ನಾಝಿ ಅಧಿಕಾರಿಗಳಿಗಾಗಿ ತಯಾರಿಸಿದ್ದ ಎಂಟು ಕಾರುಗಳಲ್ಲಿ ಇದೂ ಒಂದು ಎಂದು ಕಂಪೆನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry