ಹಿಟ್‌ ಜೋಡಿಗಳ ಗಟ್ಟಿ ಸತ್ಯ

7

ಹಿಟ್‌ ಜೋಡಿಗಳ ಗಟ್ಟಿ ಸತ್ಯ

Published:
Updated:

ಸದಾ ಪ್ರಯೋಗಶೀಲವಾಗಿರುವ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಾಲಕಾಲಕ್ಕೆ ಗೆಲ್ಲಾಪೆಟ್ಟಿಗೆ ದೋಚುವ ಕೆಲವು ಕಸರತ್ತುಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ನಂಬಿಕೆಗಳು, ಮತ್ತೂ ಕೆಲವೊಮ್ಮೆ ಅನಿವಾರ್ಯವಾಗಿ ನಡೆಯುವ ಘಟನೆಗಳು ಚಿತ್ರವನ್ನು ಭಾರೀ ಯಶಸ್ಸಿನತ್ತ ಕೊಂಡೊಯ್ಯುತ್ತದೆ.ವಿಭಿನ್ನ ಶೈಲಿಯ ಕಥೆ, ನಿರೂಪಣೆ, ತಂತ್ರಜ್ಞಾನ ಹೀಗೆ ಚಿತ್ರ ನಿರ್ಮಾಣದ ಪ್ರತಿ ವಿಭಾಗದಲ್ಲೂ ಇಲ್ಲಿನ ಮಂದಿ ಮಾಡುವ ಮೋಡಿ ಇಡೀ ಭಾರತೀಯ ಚಿತ್ರರಂಗಕ್ಕೇ ಮಾದರಿಯಾಗುತ್ತಾ ಬಂದಿದೆ. ಇದೀಗ ಅದೇ ರೀತಿಯ ಹೊಸಬಗೆಯ ಟ್ರೆಂಡ್‌ ಒಂದು ಆರಂಭವಾಗಿದೆ. ಬಾಕ್ಸ್‌್ಆಫೀಸ್‌ ಹಿಟ್‌ ಜೋಡಿಗಳನ್ನೇ ಆಯ್ಕೆ ಮಾಡಿಕೊಂಡು ಮತ್ತಷ್ಟು ಸಿನಿಮಾ ಮಾಡುವ ಹೊಸ ಟ್ರೆಂಡ್‌ ಇದೀಗ ಇದು.

ನಿತಿನ್ ರೆಡ್ಡಿ ಹಾಗೂ ನಿತ್ಯಾ ಮೆನನ್ ತೆಲುಗು ಚಿತ್ರರಂಗದ ಸದ್ಯದ ಹಾಟ್‌ ಹಿಟ್‌ ಜೋಡಿ. ‘ಇಷ್ಕ್’ ಹಾಗೂ ‘ಗುಂಡೇ ಜಾರಿ ಗಲ್ಲಂತೈಯಿಂದೆ’ (ಜಿಜೆಜಿ) ಎಂಬ ಎರಡು ಹಿಟ್ ಚಿತ್ರಗಳಲ್ಲಿ ಜೋಡಿಯಾಗಿರುವ ಈ ಇಬ್ಬರು ಜತೆಯಾಗಿ ನಟಿಸಬೇಕೆಂದು ಹಲವು ನಿರ್ಮಾಪಕರು ಪಟ್ಟು ಹಿಡಿದಿದ್ದಾರಂತೆ.‘ಇಬ್ಬರ ನಡುವಿನ ಹೊಂದಾಣಿಕೆ ಉತ್ತಮವಾಗಿದೆ. ಇಬ್ಬರನ್ನೂ ಆಯ್ಕೆ ಮಾಡುವಾಗ ಕಥೆಯ ಪಾತ್ರಗಳಿಗೆ ಅವರ ಅಗತ್ಯ ಇತ್ತು. ಆದರೆ ಅದೃಷ್ಟವೆಂಬಂತೆ ನಮ್ಮ ಯೋಜನೆ ಫಲ ನೀಡಿತು. ಪ್ರೇಕ್ಷಕರೂ ಮನಸಾರೆ ಮೆಚ್ಚಿದರು. ಆದರೆ ಇಲ್ಲಿ ಗಮನಿಸಬೇಕಾದದ್ದು ಪ್ರೇಕ್ಷಕನಿಗೆ ಕಥೆ ಮುಖ್ಯವೇ ಹೊರತು ಜನಪ್ರಿಯ ಜೋಡಿ ಅಲ್ಲ’ ಎಂದು ಜಿಜೆಜಿ ಚಿತ್ರದ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡಾ ಹೇಳುತ್ತಾರೆ.

ತೆಲುಗು ಚಿತ್ರರಂಗದಲ್ಲಿನ ಮತ್ತೊಂದು ಜನಪ್ರಿಯ ಜೋಡಿ ವಿಷ್ಣು ಮಂಚು ಹಾಗೂ ಹನ್ಸಿಕಾ ಮೋಟ್ವಾನಿ. ‘ಹಿಂದಿನ ಚಿತ್ರ ಗೆದ್ದಿದ್ದರಿಂದ ಮತ್ತೊಮ್ಮೆ ಜತೆಯಾಗಿ ನಟಿಸುತ್ತಿದ್ದೇವೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅಸಲಿಗೆ ಹನ್ಸಿಕಾ ಜತೆ ನಟಿಸುವುದು ನನಗಿಷ್ಟ. ನಾವು ಸೆಟ್‌ನಲ್ಲಿರುವಾಗ ಅಥವಾ ಬೇರೆ ಸಂದರ್ಭಗಳಲ್ಲಿ ನಮ್ಮ ನಡುವೆ ಸ್ವಪ್ರತಿಷ್ಠೆಗೆ ಅವಕಾಶವೇ ಇಲ್ಲ’ ಎನ್ನುವುದು ವಿಷ್ಣು ಅವರ ಅಭಿಪ್ರಾಯ.ಹಾಗಿದ್ದರೆ ಒಂದು ಜನಪ್ರಿಯ ಜೋಡಿ ಪದೇಪದೇ ಸಿನಿಮಾ ಮಾಡಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಷ್ಣು, ‘ಸತತವಾಗಿ ಎರಡು ಸಿನಿಮಾಗಳಲ್ಲಿ ಜತೆಯಾಗಿ ನಟಿಸಬಾರದು. ಕೆಲ ದಿನಗಳ ಅಂತರದ ನಂತರ ಮತ್ತೊಮ್ಮೆ ಅವರೇ ಜೋಡಿಯಾಗಿ ನಟಿಸಿದರೆ ಆಗ ಪ್ರೇಕ್ಷಕರಿಗೆ ಅವರನ್ನು ಕಾಣುವ ತವಕ ಹೆಚ್ಚಾಗಲಿದೆ’ ಎಂಬ ಲೆಕ್ಕಾಚಾರ ಮುಂದಿಡುತ್ತಾರೆ.ಇದೇ ರೀತಿಯ ಜನಪ್ರಿಯ ಜೋಡಿ ತಮಿಳಿನಲ್ಲೂ ಮೋಡಿ ಮಾಡಿದೆ. ಆರ್ಯನ್‌ ಹಾಗೂ ನಯನತಾರಾ ನಟಿಸಿದ ‘ಬಾಸ್‌ ಎಂಗಿರ ಭಾಸ್ಕರನ್‌’ ಚಿತ್ರದಲ್ಲಿ ನಟಿಸಿದ ನಂತರ ಈ ಜೋಡಿಗೆ ಬೇಡಿಕೆ ಹೆಚ್ಚಾಗಿತ್ತು. ನಂತರ ಈ ಜೋಡಿ ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಜೋಡಿಯಾಗುವ ಇರಾದೆ ವ್ಯಕ್ತಪಡಿಸಿತ್ತು. ಇದು ಕೆಲ ಕಾಲ ನಡೆಯಿತು. ಕೆಲವು ದಿನಗಳ ನಂತರ ಈ ಇಬ್ಬರು ಮತ್ತೆ ಜತೆಯಾಗಿ ನಟಿಸುವುದಾಗಿ ಘೋಷಣೆ ಮಾಡಿದಾಗ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ ಎಂದು ನಿರ್ಮಾಪಕರೊಬ್ಬರು ಹೇಳಿದ್ದಾರೆ.ಈ ಜೋಡಿ ಜತೆಯಾಗಿ ನಟಿಸುತ್ತಿರುವ ‘ರಾಜಾ ರಾಣಿ’ ಸಿನಿಮಾ ಬರುವ ತಿಂಗಳು ಬಿಡುಗಡೆಯಾಗಲಿದೆ. ಈ ನಡುವೆ ಸಲಿಂಬರಸನ್‌ ಜತೆ ಡೇಟಿಂಗ್‌ ಆರಂಭಿಸಿರುವ ಹನ್ಸಿಕಾ ಅವರು ಜತೆಯಾಗಿ ನಟಿಸುತ್ತಿರುವ ತಮಿಳು ಚಿತ್ರ ‘ವಾಲು’ ಹಾಗೂ ‘ವೆಟ್ಟೈ ಮನ್ನನ್‌’ ಚಿತ್ರ ಬಿಡುಗಡೆಯಾಗಬೇಕಿದೆ.  ಇತ್ತೀಚಿಗಷ್ಟೇ ತಮ್ಮ ಸಂಬಂಧವನ್ನು ಬಹಿರಂಗಪಡಿಸಿರುವುದರಿಂದ ನಿಜ ಜೀವನದ ಪ್ರೇಮಿಗಳನ್ನು ತೆರೆಯ ಮೇಲೆ ನೋಡುವ ತವಕ ಪ್ರೇಕ್ಷಕರದ್ದು.ಒಟ್ಟಿನಲ್ಲಿ ಜನಪ್ರಿಯತೆ ಎಂಬ ಅಲೆಯ ಮೇಲೆಯೇ ಸಾಗುವ ಚಿತ್ರರಂಗದಲ್ಲಿ ಇಂಥ ಕೆಲವು ಸಂಗತಿಗಳು ಕೆಲವೊಮ್ಮೆ ಕೆಲಸ ಮಾಡುವ ಹಾಗೂ ಅತಿಯಾದಾಗ ಕೈಕೊಟ್ಟ ಸಾಕಷ್ಟು ಉದಾಹರಣೆಗಳನ್ನು ಚಿತ್ರರಂಗದವರೇ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry