ಬುಧವಾರ, ಜನವರಿ 29, 2020
24 °C

ಹಿತೋಪದೇಶ ಬೇಕು, ಪ್ರಿಯೋಪದೇಶ ಬೇಡ: ಅದಮಾರುಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ವಿದ್ಯಾರ್ಥಿಗಳಿಗೆ ಗುರುಗಳು ಹಿತೋಪದೇಶ ನೀಡಬೇಕೆ ವಿನಾ ಪ್ರಿಯೋಪದೇಶ ಬೇಡ~ ಎಂದು ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಇಲ್ಲಿ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.`ಹಿತೋಪದೇಶವು ಆರಂಭದಲ್ಲಿ ಕಹಿಯಾಗಿ ದ್ದರೂ ಮತ್ತೆ ಸಿಹಿಯನ್ನು ನೀಡುತ್ತದೆ. ಪ್ರಿಯೋಪದೇಶ ಮೊದಲು ಸಿಹಿಯಾದರೂ ಮತ್ತೆ ಕಹಿಯಾಗಿರುತ್ತದೆ. ಹಿತೋಪದೇಶ ಹೊಟ್ಟೆನೋವಿಗೆ ಔಷಧವಾದರೆ ಪ್ರಿಯೋಪದೇಶ ನೋವಿಗೆ ಬೆಲ್ಲ ಕೊಟ್ಟ ಹಾಗೆ~ ಎಂದು ವಿಶ್ಲೇಷಿಸಿದರು.`ಅಧ್ಯಾಪಕರು ಭೋದಿಸುವಾಗ ವಿದ್ಯಾರ್ಥಿಗಳಿಗೆ ವಿಷಯ ವಿವರಿಸಬೇಕು. ಆದರೆ ಒತ್ತಡ ಹೇರಬೇಕಾದ ಅಗತ್ಯವಿಲ್ಲ. ಹಾಗೆಂದು ಕೇವಲ ಪ್ರವಚನ ಮಾಡಿದರೂ ಸಾಲದು. ವಿದ್ಯಾರ್ಥಿಗಳ ಕಿವಿಗೆ ಸ್ವಲ್ಪ ಕಹಿಯಾದರೂ ಕಾಲಕ್ರಮದಲ್ಲಿ ಅವರ ಬದುಕು ಹಸನಾಗುವಂತೆ ಗುರುಗಳ ಉಪದೇಶವಿರಲಿ~ ಎಂದು ಸ್ವಾಮೀಜಿ ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಎನ್.ಎ.ಮಧ್ಯಸ್ಥ  ಅಧ್ಯಕ್ಷತೆ ವಹಿಸಿದ್ದರು.ಬಂಟಕಲ್  ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಮೋಹನ್‌ದಾಸ್ ಭಟ್, ಪ್ರಾಂಶುಪಾಲ  ಪ್ರೊ.ವೇಣುಗೋಪಾಲ ಮುಳ್ಳೇರಿಯಾ, ವಿದ್ಯಾರ್ಥಿ ಸಂಘದ ನಾಯಕಿ  ಅಕ್ಷತಾ ಇದ್ದರು.

ಪ್ರತಿಕ್ರಿಯಿಸಿ (+)