ಶುಕ್ರವಾರ, ಜೂಲೈ 3, 2020
29 °C

ಹಿಪ್ಪು ನೇರಳೆ ಕೊಯ್ಲಿಗೆ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಪ್ಪು ನೇರಳೆ ಕೊಯ್ಲಿಗೆ ಯಂತ್ರ

ಬೇಸಾಯದ ಕೆಲಸಗಳಿಗೆ ಈಗ ಕೂಲಿಗಳು ಸಿಗುವುದಿಲ್ಲ. ಸಿಕ್ಕರೂ ಅವರು ಕೇಳುವಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಚೈತನ್ಯ ಅನೇಕ ರೈತರಿಗೆ ಇಲ್ಲ. ಕೂಲಿಗಳು ಮಾಡುವ ಕೆಲಸವನ್ನು ನಿರ್ವಹಿಸುವ ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಕೆಲ ಸಣ್ಣ ಪುಟ್ಟ ಯಂತ್ರಗಳಂತೂ ರೈತರಿಗೆ ಹೆಚ್ಚು ಸಹಾಯಕವಾಗುತ್ತವೆ.ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ರೈತ ಎಚ್. ಜಿ. ಗೋಪಾಲಗೌಡರು ಹಿಪ್ಪು ನೇರಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಅವರು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. ಹಿಪ್ಪು ನೇರಳೆ ಸೊಪ್ಪು ಕೊಯ್ಯಲು ಆಳುಗಳು  ಕೊರತೆಗೆ ಪರಿಹಾರವಾಗಿ ಅವರು ಪುಟ್ಟ ಯಂತ್ರವನ್ನು ಬಳಸುತ್ತಾರೆ. ಹಿಪ್ಪು ನೇರಳೆ ಗಿಡದ ಬುಡ ಕತ್ತರಿಸುವ ಓಲಿಯೊಮ್ಯಾಕ್ ಯಂತ್ರ ಒಂದು ವರ್ಷದ ಹಿಂದೆ ಮಾರುಕಟ್ಟೆಗೆ ಬಂದಾಗ ಅದರ  ಪ್ರಾತ್ಯಕ್ಷಕೆಯನ್ನು ಅವರು ನೋಡಿದ್ದರು. ಈ ಯಂತ್ರ ಖರೀದಿಸುವ ರೈತರಿಗೆ ಸರ್ಕಾರ ಸಹಾಯ ಧನ ನೀಡುತ್ತದೆ ಎಂಬುದನ್ನು ತಿಳಿದು ಅವರೂ ಒಂದು ಯಂತ್ರ ಖರೀದಿಸಿದರು.ಓಲಿಯೊಮ್ಯಾಕ್ ಯಂತ್ರವನ್ನು ರತ್ನಗಿರಿ ಇಂಪೆಕ್ಸ್ ಕಂಪನಿ ರೂಪಿಸಿದೆ. ಕಂಪೆನಿಯ ತರಬೇತುದಾರರು ಗೋಪಾಲಗೌಡರಿಗೆ ಯಂತ್ರದ ಬಳಕೆ, ಹಿಪ್ಪುನೇರಳೆ ಗಿಡದಿಂದ ಸೊಪ್ಪು ಕತ್ತರಿಸುವುದನ್ನು ಕಲಿಸಿದರು. ಎರಡು ದಿನಗಳ ಬಳಕೆಯ ನಂತರ ಗೌಡರು ಸಫಲರಾದರು.ರೇಷ್ಮೆ ಹುಳು ಸಾಕಣೆಯಲ್ಲಿ ಹುಳುಗಳಿಗೆ ಸೊಪ್ಪು ಸಮರ್ಪಕವಾಗಿ ಒದಗಿಸುವುದು ಅತ್ಯಂತ ಮುಖ್ಯ. ಎಂಟು ಎಕರೆ ಹಿಪ್ಪು ನೇರಳೆ ತೋಟವಿರುವ ಗೌಡರಿಗೆ ಈ ಯಂತ್ರ ಅನಿವಾರ್ಯವಾಗಿತ್ತು.  ಒಂದು ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ಕತ್ತರಿಸಲು 6 ಕೂಲಿಯಾಳುಗಳು  ಬೇಕು. ಈಗ ಒಬ್ಬ ಆಳನ್ನು ಇಟ್ಟುಕೊಂಡು ಯಂತ್ರದಿಂದ ಸೊಪ್ಪು ಕತ್ತರಿಸುತ್ತಾರೆ. ಅವರಿಗೆ ಐದು ಆಳುಗಳಿಗೆ ಕೊಡುತ್ತಿದ್ದ ಹಣ ಉಳಿತಾಯವಾಗಿದೆ.ಓಲಿಯೊಮ್ಯಾಕ್ ಯಂತ್ರ ಖರೀದಿಸುವವರಿಗೆ ರಾಜ್ಯ ಸರ್ಕಾರವು ಶೇ 75ರಷ್ಟು ಸಹಾಯಧನ ನೀಡುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ -94483 96893.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.