ಹಿಮಾಚಲದಲ್ಲಿ ಮತ್ತೆ ಕಾಂಗ್ರೆಸ್ ದರ್ಬಾರ್

7

ಹಿಮಾಚಲದಲ್ಲಿ ಮತ್ತೆ ಕಾಂಗ್ರೆಸ್ ದರ್ಬಾರ್

Published:
Updated:

ಶಿಮ್ಲಾ (ಪಿಟಿಐ/ಐಎಎನ್‌ಎಸ್): ಹಿಮಾಚಲ ಪ್ರದೇಶದಲ್ಲಿ ಈಗ ಕಾಂಗ್ರೆಸ್ ಕಾರ್ಯಕರ್ತರದ್ದೇ ದರ್ಬಾರ್. ಮತ್ತೊಂದಡೆ  ಚುನಾವಣೆಯಲ್ಲಿ ಸೋತ ಬಿಜೆಪಿ ಕಾರ್ಯಕರ್ತರಲ್ಲಿ ನೋವಿನ ಛಾಯೆ.


ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಬಹುಮತ ಪಡೆದ ಕಾಂಗ್ರೆಸ್‌ನ ಕಾರ್ಯಕರ್ತರು ಎಲ್ಲೆಡೆ ಡೋಲು ಕುಣಿತ ಮತ್ತು ಸಿಹಿ ಹಂಚುವ ಮೂಲಕ ಮತ್ತೆ ಅಧಿಕಾರವನ್ನು ಪಡೆದ ಸಂತೋಷವನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿತ್ತು. ಕಾಂಗ್ರೆಸ್ ಬಹುಮತ ಪಡೆದ ಬೆನ್ನಲ್ಲೇ ಮುಂದಿನ ಮುಖ್ಯ ಮಂತ್ರಿ ಯಾರು ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ.ಸೋಲೊಪ್ಪಿಕೊಂಡ ಧುಮಾಲ್

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ಒಪ್ಪಿಕೊಂಡಿರುವ ಬಿಜೆಪಿಯ ಹಿರಿಯ ನಾಯಕ, ಮುಖ್ಯಮಂತ್ರಿ ಪಿ.ಧುಮಾಲ್, ಸೋಲಿಗೆ ಕಾರಣವನ್ನು ಪಕ್ಷದ ಸಭೆಗಳಲ್ಲಿ ವಿಮರ್ಶಿಸಲಾಗುತ್ತದೆ ಎಂದು ತಿಳಿಸಿದರು.

 

ಕಳೆದ ಐದು ವರ್ಷಗಳಲ್ಲಿ ರಾಜ್ಯದಾದ್ಯಂತ ಸಾಕಷ್ಟು ಅಭಿವೃದ್ಧಿಕಾರ್ಯಗಳು ನಡೆದಿದ್ದವು. ಹೀಗಾಗಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸವಿತ್ತು. ಆದರೆ ಈಗ ಉಂಟಾಗಿರುವ ಸೋಲಿಗೆ ಕಾರಣವನ್ನು ಹುಡುಕುವುದಾಗಿ ತಿಳಿಸಿದರು.

 

`ಮತದಾರರು ಯಾವ ಸರ್ಕಾರ ಆಳ್ವಿಕೆ ನಡೆಸಬೇಕೆಂದು ತೀರ್ಮಾನಿಸಿದ್ದಾರೆ. ಹಾಗಾಗಿ ಹೊಸ ಸರ್ಕಾರ ಮತ್ತು ಮುಖ್ಯಮಂತ್ರಿಗೆ ಒಳ್ಳೆಯದಾಗಲಿ' ಎಂದು ಅವರು ಹಾರೈಸಿದರು.

 

`ಬಂಡಾಯಗಾರರಿಂದಾಗಿ ಪಕ್ಷಕ್ಕೆ ಸೋಲುಂಟಾಯಿತೇ `ಎಂಬ ಸುದ್ದಿಗಾರರ ಪ್ರಶ್ನೆಗೆ `ಅದು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿದ ನಂತರ ತಿಳಿಯುತ್ತದೆ' ಎಂದು ಚುಟುಕಾಗಿ ಉತ್ತರಿಸಿದರು. ಹಮಿರ್‌ಪುರ್ ವಿಧಾನಸಭಾ ಕ್ಷೇತ್ರದಿಂದ ಪಿ. ಧುಮಾಲ್ ಜಯ ಗಳಿಸಿದಾರೆ. ಅವರು ಕಾಂಗ್ರೆಸ್‌ನ ನರೇಂದ್ರ ಠಾಕೂರ್ ಅವರನ್ನು 9500 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

 

ಸಿಂಗ್ ದಾಖಲೆ ಗೆಲುವು 

ಕಾಂಗ್ರೆಸ್‌ನ ವೀರಭದ್ರ ಸಿಂಗ್ 20 ಸಾವಿರ ದಾಖಲೆಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

 

ಶಿಮ್ಲಾ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೀರಭದ್ರ ಸಿಂಗ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಈಶ್ವರ್ ರೊಹಾಲ್ ಅವರನ್ನು ಸೋಲಿಸಿದ್ದಾರೆ. ವೀರಭದ್ರ ಸಿಂಗ್‌ಗೆ 28892 ಮತಗಳು ಹಾಗೂ ರೊಹಾಲ್‌ಗೆ 8892 ಮತಗಳು ಲಭ್ಯವಾಗಿವೆ. 

 

ಈಗಾಗಲೇ ಐದು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿರುವ ವೀರಭದ್ರಸಿಂಗ್, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವವಹಿಸಿದ್ದರು. 

 

ಪಕ್ಷದ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿಸಿದ್ದರು.ಸಿ.ಎಂ ಪಟ್ಟ - ಸೋನಿಯಾ ನಿರ್ಧಾರಕ್ಕೆ

ದಾಖಲೆಯ ಮತಗಳಿಕೆಯ ಮೂಲಕ ಗೆಲುವು ಸಾಧಿಸಿದ್ದರೂ, ಹೊಸ ಮುಖ್ಯಮಂತ್ರಿಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ಹೇಳಿದ್ದಾರೆ.

 


`ಹಿಮಾಚಲ ಪ್ರದೇಶದಲ್ಲಿ ಪಕ್ಷದ ಗೆಲುವಿನ ಹಿಂದಿರುವ ಕಾರಣ ಹಾಗೂ ನನ್ನ ಶ್ರಮವನ್ನು ಅಧ್ಯಕ್ಷರಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಹಾಗಾಗಿ ಹೊಸ ಮುಖ್ಯಮಂತ್ರಿಯ ಆಯ್ಕೆಯ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ' ಎಂದು ಸುದ್ದಿಗಾರರಿಗೆ ತಿಳಿಸಿದರು.

 


ಪಕ್ಷದ ಹೊರಗಿನ ನಾಯಕರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಹೊರಗಿನವರನ್ನು  ಮುಖ್ಯಮಂತ್ರಿಯಾಗಿ ಮಾಡುವುದಿಲ್ಲ ಎಂಬ ಭರವಸೆ ಇದೆ. ಹೀಗೆ ಆಗಲು ನಾವು ಬಿಡುವುದಿಲ್ಲ' ಎಂದು ಹೇಳಿದ್ದರು. ಕೇಂದ್ರ ಸಚಿವ ಆನಂದ ಶರ್ಮ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆಯನ್ನು ವೀರಭದ್ರಸಿಂಗ್ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ.ಸಿ.ಎಂ ಪಟ್ಟ - ಸೋನಿಯಾ ನಿರ್ಧಾರಕ್ಕೆ

ದಾಖಲೆಯ ಮತಗಳಿಕೆಯ ಮೂಲಕ ಗೆಲುವು ಸಾಧಿಸಿದ್ದರೂ, ಹೊಸ ಮುಖ್ಯಮಂತ್ರಿಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ಹೇಳಿದ್ದಾರೆ.

 


`ಹಿಮಾಚಲ ಪ್ರದೇಶದಲ್ಲಿ ಪಕ್ಷದ ಗೆಲುವಿನ ಹಿಂದಿರುವ ಕಾರಣ ಹಾಗೂ ನನ್ನ ಶ್ರಮವನ್ನು ಅಧ್ಯಕ್ಷರಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಹಾಗಾಗಿ ಹೊಸ ಮುಖ್ಯಮಂತ್ರಿಯ ಆಯ್ಕೆಯ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ' ಎಂದು ಸುದ್ದಿಗಾರರಿಗೆ ತಿಳಿಸಿದರು.

 


ಪಕ್ಷದ ಹೊರಗಿನ ನಾಯಕರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಹೊರಗಿನವರನ್ನು  ಮುಖ್ಯಮಂತ್ರಿಯಾಗಿ ಮಾಡುವುದಿಲ್ಲ ಎಂಬ ಭರವಸೆ ಇದೆ. ಹೀಗೆ ಆಗಲು ನಾವು ಬಿಡುವುದಿಲ್ಲ' ಎಂದು ಹೇಳಿದ್ದರು. ಕೇಂದ್ರ ಸಚಿವ ಆನಂದ ಶರ್ಮ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆಯನ್ನು ವೀರಭದ್ರಸಿಂಗ್ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ.


 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry