ಹಿಮಾಚಲ ಪ್ರದೇಶ: ಮಿಗ್-29 ವಿಮಾನ ಪತನ

7

ಹಿಮಾಚಲ ಪ್ರದೇಶ: ಮಿಗ್-29 ವಿಮಾನ ಪತನ

Published:
Updated:

ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದ ಲಹಾವುಲ್-ಸ್ಪಿತಿ ಎಂಬಲ್ಲಿ ರಾತ್ರಿ ಹಾರಾಟ ಅಭ್ಯಾಸದ ವೇಳೆ ಮಿಗ್-29 ಯುದ್ದ ವಿಮಾನವೊಂದು ಪರ್ವತವೊಂದಕ್ಕೆ ಅಪ್ಪಳಿಸಿದ್ದು ಪೈಲಟ್‌ನ ಸ್ಥಿತಿ ಬಗ್ಗೆ ತಿಳಿದುಬಂದಿಲ್ಲ. ಈ ಅಪಘಾತ ಮಂಗಳವಾರ ರಾತ್ರಿ 8.30ಕ್ಕೆ ಇಲ್ಲಿಂದ 400 ಕಿ.ಮೀ. ದೂರದ ಚೊಕಾಂಗ್ ಗ್ರಾಮದಲ್ಲಿ ಸಂಭವಿಸಿದೆ ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.ವಿಮಾನದ ಅವಶೇಷ ಮತ್ತು ಕಾಣೆಯಾಗಿರುವ ಪೈಲಟ್‌ನನ್ನು ಪತ್ತೆಹಚ್ಚಲು ತಂಡವೊಂದನ್ನು ಕಳುಹಿಸಲಾಗಿದೆ ಎಂದು ದೆಹಲಿಯಲ್ಲಿ ವಾಯು ಪಡೆ ವಕ್ತಾರರೊಬ್ಬರು ತಿಳಿಸಿದ್ದಾರೆ.ಪಶ್ವಿಮ ಏರ್ ಕಮಾಂಡ್‌ನ ಎರಡು ಮಿಗ್-29 ವಿಮಾನಗಳು ಜಲಂಧರ್‌ನ ಅದಂಪುರದಿಂದ ಅತಿ ಎತ್ತರದ ರಾತ್ರಿ ಹಾರಾಟ ಅಭ್ಯಾಸಕ್ಕಾಗಿ ಹೊರಟಿದ್ದು ಅವುಗಳಲ್ಲಿ ಒಂದು ಪರ್ವತಕ್ಕೆ ಅಪ್ಪಳಿಸಿದೆ. ಎರಡನೇ ವಿಮಾನ ಸರಕ್ಷಿತವಾಗಿ ವಾಪಸಾಗಿದೆ.  ಅಭ್ಯಾಸವನ್ನು ಮುಂದುವರೆಸಲಾಗಿದೆ ಎಂದು ಭಾರತೀಯ ವಾಯು ಪಡೆ ತಿಳಿಸಿದೆ.ಈ ವರ್ಷ ಐಎಎಫ್ ಯುದ್ಧ ವಿಮಾನ ಅಪಘಾತಕ್ಕೆ ಈಡಾಗಿರುವುದು ಇದು ಏಳನೇಯದು ಹಾಗೂ ಈ ತಿಂಗಳಲ್ಲಿ ಎರಡನೆಯದು. ಅಕ್ಟೋಬರ್ 7 ರಂದು ಮಿಗ್-21 ವಿಮಾನ ರಾಜಾಸ್ತಾನದ ಬಾರ್ಮರ್ ಜಿಲ್ಲೆಯ ಉತ್ತರ್‌ಲಾಯ್ ವಿಮಾನ ನಿಲ್ದಾಣದ ಬಳಿ ಅಪ್ಪಳಿಸಿತ್ತು. ಆದರೆ ಪೈಲಟ್ ಸುರಕ್ಷಿತವಾಗಿ ಹೊರ ಬಂದಿದ್ದರು.ನಮಗೆ ಅಪಘಾತದ  ಬಗ್ಗೆ ಮಂಗಳವಾರ ರಾತ್ರಿ 11 ಗಂಟೆಗೆ ತಿಳಿಸಲಾಯಿತು. ರಕ್ಷಣಾ ತಂಡ 3 ಗಂಟೆ ವೇಳೆಗೆ ಆ ಪ್ರದೇಶಕ್ಕೆ ತಲುಪಿತು ಎಂದು ಲಹಾವುಲ್-ಸ್ಪಿತಿ ಡಿಎಸ್‌ಪಿ ಖಜಾನಾ ರಾಮ್ ತಿಳಿಸಿದ್ದಾರೆ. `ಅದು ಅತಿ ಎತ್ತರದ ಪ್ರದೇಶವಾದ್ದರಿಂದ ಅವಶೇಷ ಪತ್ತೆಗೆ ತೊಂದರೆಯಾಗಿದೆ~ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry