ಹಿರಣ್ಮಯಿ ಹಾಡು
ಕಿಕ್ಕಿರಿದು ತುಂಬಿದ್ದ ಸಭಾಂಗಣ. ಹದಿಮೂರರ ಹರೆಯದ ಎಸ್.ಹಿರಣ್ಮಯಿ ಎಂಬ ಬಾಲಪ್ರತಿಭೆ ಹಾಡುತ್ತಿದ್ದಾಗ ತನ್ಮಯರಾಗಿ ಕೇಳುತ್ತಾ ಕುಳಿತ ಪ್ರೇಕ್ಷಕವೃಂದ ಕಾಣಸಿಕ್ಕಿದ್ದು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ನ ಡಿವಿಜಿ ಸಭಾಂಗಣದಲ್ಲಿ.
ಸ್ಪಷ್ಟ ಉಚ್ಛಾರಣೆ ಹಾಗೂ ಭಾವಪೂರ್ಣವಾಗಿ ಹಿರಣ್ಮಯಿ ಒಂದಾದ ಮೇಲೊಂದರಂತೆ ದಾಸರ ಕೃತಿ, ಮೀರಾಭಜನ್, ಮರಾಠಿ ಅಭಂಗಗಳನ್ನು ಹಾಡುತ್ತಿದ್ದರೆ ಕೇಳುಗರು ಭಾವಪರವಶರಾಗಿದ್ದರು.
ಪಾದವ ತೋರೋ ಶ್ರೀರಾಮ, ಕರುಣಾಳು ಶಿರಡಿಯ ಶ್ರೀ ಸಾಯಿನಾಥಾ, ತುಂಗಾತೀರದಿ ನಿಂತ ಸುಯತಿವರ, ನಾರಾಯಣ ರಮಾರಮಣ ಎಂಬ ನಾಟ್ಯಗೀತೆ, ಕರವ ಮುಗಿದಾ ಮುಖ್ಯಪ್ರಾಣ, ಅತಕುಟೀ ಭಾವೇ ಮನ ಎಂಬ ತುಕಾರಾಮರ ಅಭಂಗ್, ಮೈ ಗೋವಿಂದ ಗುಣಗಾರ ಎಂಬ ಮೀರಾಭಜನ್, ವೆಂಕಟದಾಸರ ನಂದೇ ನಭೋ ಇಲ್ಲಿ ನಿಂದೇ ಇದೆಲ್ಲವೂ -ಹೀಗೆ ವೈವಿಧ್ಯಮಯ ರಚನೆಗಳನ್ನು 20 ನಿಮಿಷಕ್ಕೂ ಹೆಚ್ಚು ಕಾಲ ಮನಮುಟ್ಟುವಂತೆ ಹಾಡಿದ ಈ ಕಿರಿಯ ಗಾಯಕಿಯ ಸಂಗೀತ ಪ್ರಬುದ್ಧತೆಯಿಂದ ಕೂಡಿದ್ದು ಉಜ್ವಲ ಭವಿಷ್ಯದ ಹಾದಿ ತೋರುತ್ತಿತ್ತು.
ಕೀಬೋರ್ಡ್ನಲ್ಲಿ ಶ್ರೀ ನವನೀತ್, ತಬಲಾದಲ್ಲಿ ವಿ. ದತ್ತಕುಮಾರ್ ಹಾಗೂ ವಿಶೇಷ ತಾಳ ವಾದ್ಯದಲ್ಲಿ ಶ್ರೀನಿವಾಸ್ಪ್ರಸಾದ್ ಹಿರಣ್ಮಯಿಗೆ ನೆರವಾದರು. ಕಾರ್ಯಕ್ರಮ ಮುಗಿದಾಗ ಸಂಗೀತದ ಹೊಳೆಯಲ್ಲಿ ಮಿಂದೆದ್ದ ಅನುಭವವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.