ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ: ಕಬ್ಬು ನುರಿತ ಆರಂಭ

7

ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ: ಕಬ್ಬು ನುರಿತ ಆರಂಭ

Published:
Updated:

ಹುಕ್ಕೇರಿ:  ಸ್ವಾತಂತ್ರ್ಯ ಸೇನಾನಿ ದಿ.ಅಪ್ಪಣಗೌಡ ಪಾಟೀಲರು ತಮ್ಮ ದೂರದೃಷ್ಠಿಯಿಂದ ಸಹಕಾರ ತತ್ವದಡಿ ಈ ಭಾಗದ ರೈತರ ಬೆಳವಣಿಗೆಗೆ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದರು ಎಂದು ನಿಡಸೋಸಿ ಮಠದ ಪಂಚಮ  ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.ಸೋಮವಾರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ  52ನೇ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಇಂದು ಮಾರುಕಟ್ಟೆಯಲ್ಲಿ ಬೆಲೆಗಳ ವೈಪರಿತ್ಯದಿಂದ ರೈತ ತೀವ್ರ ಸಂಕಷ್ಟದಲ್ಲಿದ್ದು ಅವರು ಬೆಳೆದ ಕಬ್ಬಿನ ಬೆಳೆಗೆ ಹೆಚ್ಚಿನ ದರ ನೀಡುಲು ಸಕ್ಕರೆ ಕಾರ್ಖಾನೆಗಳು ಮುಂದಾಗಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ರಮೇಶ್ ಕತ್ತಿ, ಕಾರ್ಮಿಕರು ಹಾಗೂ ರೈತರು ಕಾರ್ಖಾನೆ ಪರ ಹೆಚ್ಚಿನ ಒಲವು ತೋರಿದಾಗ ಮಾತ್ರ ಸುತ್ತಲಿನ ಸಮಾಜದ ಅಭಿವೃದ್ಧಿಯ ಜೊತೆಗೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಮಾಜಿ ಸಚಿವ ಮಲ್ಲಾರಿಗೌಡಾ ಪಾಟೀಲ, ಮಾಜಿ ಶಾಸಕ ಬಾಳಾಸಾಹೇಬ ಸಾರವಾಡಿ, ಅಧ್ಯಕ್ಷ ಶಿವನಾಯಿಕ ನಾಯಿಕ, ನಿರ್ದೆಶಕರಾದ ಶ್ರೆಶೈಲಪ್ಪ ಮಗದುಮ್ಮ, ಬಸವಣ್ಣೆ ಸರನಾಯಿಕ, ಪ್ರಹ್ಲಾದ ಪಾಟೀಲ, ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ರಾಜಕುಮಾರ ಪಾಟೀಲ, ಉದಯಕುಮಾರ ದೇಸಾಯಿ, ಪುರಸಭೆ ಅಧ್ಯಕ್ಷ ಅಮರ ನಲವಡೆ, ಅಶೋಕ ಪಟ್ಟಣಶೆಟ್ಟಿ, ಜಯಪ್ರಕಾಶ ನಲವಡೆ, ಶ್ರೆಕಾಂತ ಹತನೂರೆ, ಪರಗೌಡಾ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಈರಣ್ಣ ಹಾಲದೇವರಮಠ, ಜಿ.ಪಂ.ಸದಸ್ಯ ಮಹೇಶ ಭಾತೆ, ಎ.ಪಿ.ಎಂ.ಸಿ. ಅಧ್ಯಕ್ಷ ಸುಹಾಸ ಜೋಶಿ,  ಎಂ.ಡಿ. ಡಾ.ಅಶೋಕ ಪಾಟೀಲ, ಜಯಸಿಂಗ ಸನದಿ, ಸುಭಾಸ ಮಣ್ಣಿಕೇರಿ,  ಅರುಣ ಚೌಗಲಾ, ಎಂ.ಕೆ.ದಾವನಕಟ್ಟಿ ಡಿ.ಸಿ.ಸಿ. ಬ್ಯಾಂಕ ನಿರ್ದೇಶಕ ಗಜಾನನ ಕ್ವಳ್ಳಿ, ಹುನೂರ ವಿಠರಾಯ ಪೂಜಾರಿ  ಮತ್ತು ಮಾಯಪ್ಪ ಪೂಜೇರಿ ದಂಪತಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry