ಹಿರಿಯರನ್ನು ಗೌರವಿಸಿ: ಹಾರಕೂಡ ಶ್ರೀ

ಗುರುವಾರ , ಜೂಲೈ 18, 2019
29 °C

ಹಿರಿಯರನ್ನು ಗೌರವಿಸಿ: ಹಾರಕೂಡ ಶ್ರೀ

Published:
Updated:

ಗುಲ್ಬರ್ಗ: ಮಾನವನಲ್ಲಿ ಭಕ್ತಿ ಮತ್ತು ಗುರು ಹಿರಿಯರಿಗೆ ಗೌರವಿಸುವ ಪರಿಪಾಠ ಬೆಳದುಕೊಂಡು ಬರಬೇಕು. ಅದು ಇತ್ತಿಚಿಗೆ ಕಡಿಮೆಯಾಗುತ್ತಿದೆ ಎಂದು ಹಾರಕೂಡ ಮಠದ ಚನ್ನಮಲ್ಲ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.ನಗರದ ಐವಾನ್- ಇ-ಶಾಹಿ ಬಡಾವಣೆಯಲ್ಲಿರುವ ವಿಜಯಕುಮಾರ ದೇಶಮುಖ ಅವರ ಮನೆಯಲ್ಲಿ ಈಚೆಗೆ ನಡೆದ 12ನೇ ದ್ವಾದಶ ವರ್ಷ ರುದ್ರಾಭಿಷೇಕ ಹಾಗೂ ಪಾದಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಇಂದಿನ ಕಲುಷಿತ ಸಮಾಜದಲ್ಲಿ ಭಕ್ತಿಯ ಮಾರ್ಗ ಹುಡುಕುವಂಥ ಪರಿಸ್ಥಿತಿ ನಿರ್ಮಾಣವಾಗಿವೆ. ಯುವಕರಲ್ಲಿ ಭಕ್ತಿಭಾವ ಬೆಳೆಸುವಂತಹ ಕಾರ್ಯ ಮಾಡಬೇಕಾಗಿದೆ. ಭಕ್ತಿ ಮಾರ್ಗದಿಂದ ಹೋದರೆ ಪೂಜಾ ಪ್ರಧಾನ ಮಾರ್ಗಕ್ಕೆ ಹೋಗುತ್ತದೆ. ಹೀಗಾಗಿ ಮನುಷ್ಯ ಭಕ್ತಿಯಿಂದ ಸತ್ಕರಿಸಿದರೆ ಸನ್ಮಾರ್ಗವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಾಗಣ್ಣ ಗೌಡ ಪಾಟೀಲ, ಭೂಷಣ ತಾಂದಳೆ, ಮಲ್ಲು ದೇವರಗುಡಿ, ಗುರುನಂಜಯ್ಯ, ಗಣೇಶ ಪಾಟೀಲ, ಶರಣು ನಿಗ್ಗುಡಿಗಿ, ಅಭೀಷೇಕ ಪಾಟೀಲ, ಮಡಿವಾಳಪ್ಪ ನರಿಬೋಳ, ಸಂಗಣ್ಣ ವಾಲಿ, ಶರಣು ಕೌಲಗಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry