ಶುಕ್ರವಾರ, ಮೇ 14, 2021
31 °C

ಹಿರಿಯರಿಗೊಂದು ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳಿನ ಮುಸ್ಸಂಜೆಯಲ್ಲಿರುವ ವ್ಯಕ್ತಿಗಳ ಗೌರವಯುತ ಬದುಕಿಗಾಗಿ ಶ್ರಮಿಸುತ್ತಿದೆ ಡಿಗ್ನಿಟಿ ಫೌಂಡೇಶನ್. ಈಗ ಮೊದಲ ಬಾರಿಗೆ ಅವರ ನಿತ್ಯದ ಬದುಕಿಗೆ ಅಗತ್ಯವಾಗಿ ಬೇಕಾಗುವ ಸರಕುಗಳನ್ನು ಮತ್ತು ಸೇವಾ ಮಾಹಿತಿಯನ್ನು ಒದಗಿಸುವ ರಿಟೈರ್‌ಮೆಂಟ್ ಇಂಡಿಯಾ ಎಕ್ಸ್‌ಪೊ ಹಮ್ಮಿಕೊಂಡಿದೆ.ಇಂದಿನಿಂದ ಸೋಮವಾರದ ವರೆಗೆ (ಸೆ. 17- 19) ನಡೆಯುವ ಮೇಳದಲ್ಲಿ ಇಳಿವಯಸ್ಸಿನವರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವ ಬಹ್ರಿ ಎಸ್ಟೇಟ್, ಜೈನ್ ಫಾರ್ಮ್ಸ, ಬ್ಯಾಂಕ್ ಆಫ್  ಇಂಡಿಯಾ, ಎಲ್‌ಐಸಿ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್, ಬಜಾಜ್ ಅಲಯನ್ಸ್ ಲೈಫ್ ಇನ್ಷುರೆನ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ವಾಸನ್ ಹೆಲ್ತ್‌ಕೇರ್, ಸಾಕೇತ್ ಎಂಜಿನಿಯರ್ಸ್‌, ವಾಸನ್ ಐ ಕೇರ್, ಟೈಟನ್ ಐ ಪ್ಲಸ್, ಫೋರ್ಟಿಸ್, ಮಣಿಪಾಲ್ ಆಸ್ಪತ್ರೆ, ಆಯುಷ್, ಫಿಟ್‌ನೆಸ್ ಸೆಂಟರ್‌ಸ್ಪಾ, ಫಾರ್ಮಾ, ಹಿರಿಯ ನಾಗರಿಕರ ಹೌಸಿಂಗ್ ಸೊಸೈಟಿ ಮೊದಲಾದವು ಭಾಗವಹಿಸಲಿವೆ.
ರಿಟೈರ್‌ಮೆಂಟ್ ಇಂಡಿಯಾ ಎಕ್ಸ್‌ಪೊನಲ್ಲಿ ಹಿರಿಯ ನಾಗರಿಕರಿಗಾಗಿ ಹ್ಯೂಮರ್ ಟಾಕ್, ಕ್ವಿಜ್, ಭಜನೆ, ಹಾಡುಗಾರಿಕೆ, ಓರಿಗಾಮಿ, ಪಾಶ್ಚಾತ್ಯ ಮ್ಯೂಸಿಕಲ್ ಬ್ಯಾಂಡ್, ಜನಪದ ನೃತ್ಯ, ಅಂತಾಕ್ಷರಿ, ಡಿವೈನ್ ಥೆರಪಿ ಮೊದಲಾದ ಮನರಂಜನಾ ಕಾರ್ಯಕ್ರಮಗಳಿವೆ. ನಿವೃತ್ತಿ ನಂತರದ ಜೀವನವನ್ನು ಹೇಗೆ ಅರ್ಥಪೂರ್ಣವಾಗಿ ಕಳೆಯಬೇಕು ಎಂಬುದರ ಕುರಿತು ತಜ್ಞರ ಮಾರ್ಗದರ್ಶನ ಶಿಬಿರಗಳಿವೆ.

ಸ್ಥಳ: ನಿಮ್ಹಾನ್ಸ್ ಕನ್‌ವೆನ್ಷನ್ ಸೆಂಟರ್, ಹೊಸೂರು ರಸ್ತೆ. ಬೆಳಿಗ್ಗೆ 11ರಿಂದ.

ಇದೇ ಸಂದರ್ಭದಲ್ಲಿ ಮೂರು ದಿನ ನಡೆಯುವ ಕಾರ್ಯಾಗಾರದಲ್ಲಿ ವೃದ್ಧರು ಪಾಲ್ಗೊಳ್ಳಬಹುದು. ತಮಗಾಗೇ ಲಭ್ಯವಿರುವ ವಿಶೇಷ ಸಾಧನ ಸಲಕರಣೆಗಳ ಬಗ್ಗೆ ತಿಳಿದುಕೊಳ್ಳಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.