ಹಿರಿಯರ ಕ್ರೀಡಾಕೂಟದಲ್ಲಿ ಸಾಧನೆ

7

ಹಿರಿಯರ ಕ್ರೀಡಾಕೂಟದಲ್ಲಿ ಸಾಧನೆ

Published:
Updated:

ಹಾಸನ: ಉಡುಪಿ ಜಿಲ್ಲಾ ಹಿರಿಯ ಕ್ರೀಡಾಸಂಸ್ಥೆಯ ಆಶ್ರಯದಲ್ಲಿ ಈಚೆಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಂಗಳೂರು ,ಉಡುಪಿ, ಮೈಸೂರು, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಹಾಸನ ಜಿಲ್ಲಾ ಹಿರಿಯ ಕ್ರಿಡಾಪಟುಗಳು ವಿವಿಧ ವಯೋಮಿತಿ ವಿಭಾಗದಲ್ಲಿ ಭಾಗವಹಿಸಿ 19 ಚಿನ್ನ,12 ಬೆಳ್ಳಿ ಹಾಗೂ 14 ಕಂಚಿನ ಪದಕ ಪಡೆದಿದ್ದಾರೆ.

ಪದಕ ವಿಜೇತರ ವಿವರ ಇಂತಿದೆ35 ವರ್ಷದ ವಿಭಾಗದಲ್ಲಿ: ಎಂ.ಆರ್.ಕುಶ 200ಮೀ ಓಟ (ಕಂಚು), ಎಚ್.ಕೆ.ಸುರೇಶ 1500 ಮೀ ಓಟದಲ್ಲಿ (ಚಿನ್ನ) 800 ಮೀ (ಕಂಚು) 400 ಮೀ (ಬೆಳ್ಳಿ),ಬಿ.ಎನ್.ಮಹೇಶ್, ಶಾಟ್‌ಪುಟ್ (ಕಂಚು), ಜಾವಲಿನ್ ಥ್ರೋ (ಬೆಳ್ಳಿ), ಅನಿಲ್ ಕುಮಾರ್, 5 ಕಿ.ಮೀ ನಡಿಗೆ (ಚಿನ್ನ) 800 ಮೀ ಓಟ (ಬೆಳ್ಳಿ), 1500 ಮೀ ಓಟ (ಕಂಚು), ಹಾಗೂ ಲೋಕೇಶ್, ಜಾವಲಿನ್ ಥ್ರೋ (ಚಿನ್ನ), ಶಾಟ್‌ಪುಟ್ (ಬೆಳ್ಳಿ), 40 ವರ್ಷ ವಿಭಾಗದಲ್ಲಿ: ಗೋವಿಂದರಾಜು, 5000ಮೀ ಓಟ (ಕಂಚು),50 ವರ್ಷ ವಿಭಾಗದಲ್ಲಿ: ಬಾರಾಳು ಪ್ರಕಾಶ 800 ಮೀ ಓಟ ಹಾಗೂ 1500 ಮೀ ಓಟ (ಕಂಚು),

55 ವರ್ಷ ವಿಭಾಗದಲ್ಲಿ: ಸಿ.ನಿಂಗಪ್ಪ ಶಾಟ್‌ಪುಟ್ (ಚಿನ್ನ) 400 ಮೀ. ಓಟ (ಚಿನ್ನ) 100 ಮೀ. ಓಟ (ಕಂಚು), ಎಸ್.ಟಿ.ನಂಜೇಗೌಡ ಡಿಸ್ಕ್‌ಸ್ ಥ್ರೋ (ಬೆಳ್ಳಿ), ಜಾವಲಿನ್ ಥ್ರೋ , ಹ್ಯಾಮರ್ ಥ್ರೋ (ಚಿನ್ನ),60 ವರ್ಷ ವಿಭಾಗದಲ್ಲಿ: ನಿರ್ವಾಣಯ್ಯ ಲಾಂಗ್ ಜಂಪ್, ಟ್ರೀಪಲ್ ಜಂಪ್ (ಕಂಚು), ಕೆ.ಜಿ ದಾಸೇಗೌಡ 100 ಮೀ. ಓಟ, ಶಾಟ್‌ಪುಟ್  (ಕಂಚು), ಜಾವಲಿನ್ ಥ್ರೋ (ಚಿನ್ನ), ಎಸ್.ಆರ್.ಕಾಳೇಗೌಡ 500 ಮೀ , 1500 ಮೀ ಓಟ,5 ಕಿ.ಮೀ ನಡಿಗೆ (ಚಿನ್ನ),65 ವರ್ಷ ವಿಭಾಗದಲ್ಲಿ: ಬಿ. ಬಸಪ್ಪ ಹೈಜಂಪ್ (ಚಿನ್ನ), ಡಿಸ್ಕ್‌ಥ್ರೋ ಹಾಗೂ ಶಾಟ್ ಪುಟ್(ಕಂಚು), ಉಮಾಪತಿ ಮೊದಲಿಯಾರ್ 400 ಮೀ. ಓಟ (ಬೆಳ್ಳಿ), ಬಿ.ಪಿ. ಮುನಿಸ್ವಾಮಿ, ಹೈಜಂಪ್ (ಬೆಳ್ಳಿ), ಲಾಂಗ್ ಜಂಪ್ ಹಾಗೂ ಟ್ರಿಪಲ್ ಜಂಪ್(ಚಿನ್ನ),70 ವರ್ಷ ವಿಭಾಗದಲ್ಲಿ: ಯು.ಬಿ.ರಾಜು 100 ಮೀ, 200 ಮೀ, ಲಾಂಗ್ ಜಂಪ್ (ಚಿನ್ನ),

ಮಹಿಳಾ ವಿಭಾಗ40 ವರ್ಷ ವಿಭಾಗದಲ್ಲಿ: ಭಾರತಿ ವಿ ಶಿರೂರ್ ಹ್ಯಾಮರ್ ಥ್ರೋ (ಬೆಳ್ಳಿ), ಡಿಸ್ಕಸ್ ಥ್ರೋ (ಕಂಚು),45 ವರ್ಷ ವಿಭಾಗದಲ್ಲಿ: ಕೆ.ವಿಜಯ್ ಕುಮಾರಿ ಹೈಜಂಪ್, ಹ್ಯಾಮರ್ ಥ್ರೋ  (ಬೆಳ್ಳಿ), ಟ್ರೀಪಲ್ ಜಂಪ್  (ಚಿನ್ನ), ಶಾರದ ಮಹದೇವ್ 800 ಮೀ ಓಟ, 500ಮೀ ಓಟ (ಚಿನ್ನ), 1500 ಮೀ ಓಟ (ಬೆಳ್ಳಿ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry