ಹಿರಿಯರ ಗುರುತು ಚೀಟಿ

7

ಹಿರಿಯರ ಗುರುತು ಚೀಟಿ

Published:
Updated:

ನನಗೆ 60 ವರ್ಷ ಆಗಿದೆ. ನನಗೆ ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಕೊಟ್ಟಿರುತ್ತಾರೆ. ಆದರೆ ಬಿಎಂಟಿಸಿಯ ಕೆಲವು ನಿರ್ವಾಹಕರು ‘ನಿಮಗೆ 65 ವರ್ಷ ಆಗಿರಬೇಕು’ ಎಂದು ತಿಳಿಸಿ ರಿಯಾಯ್ತಿ ದರದ ಟಿಕೆಟ್‌ಗಳನ್ನು ಕೊಡಲು ನಿರಾಕರಿಸುತ್ತಾರೆ (ನಿರ್ವಾಹಕರಲ್ಲ). ಸರ್ಕಾರದಿಂದ ಗುರುತಿನ ಚೀಟಿ ಕೊಟ್ಟಿದ್ದರೂ ಕೂಡ ಮಾನ್ಯ ಮಾಡುವುದಿಲ್ಲ. ನೀವು ಪೂರ್ತಿ ಹಣ ಕೊಟ್ಟು ಟಿಕೆಟ್ ತೆಗೆದುಕೊಳ್ಳಿ ಎಂದು ತಿಳಿಸುತ್ತಾರೆ.ಉದಾ: ಮಾರ್ಗ ಸಂಖ್ಯೆ ಟಿ - 12, 36 ಎಫ್, 36, 96 ಎ, 96, 12 ಹಾಗೂ ಇನ್ನಿತರ ಬಸ್ಸಿನ ಅನೇಕ ನಿರ್ವಾಹಕರಿಂದ ನನಗೆ ಈ ಅನುಭವವಾಗಿದೆ. ಆದ್ದರಿಂದ ಹಿರಿಯ ನಾಗರಿಕರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅವರಿಗೆ ರಿಯಾಯ್ತಿ ದರದ ಟಿಕೆಟ್‌ಗಳನ್ನು ನೀಡಬೇಕೆಂದು ಸಂಸ್ಥೆಯ ಎಲ್ಲಾ ನಿರ್ವಾಹಕರಿಗೂ ಸೂಚಿಸಲು ಬಿಎಂಟಿಸಿಗೆ ಮನವಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry