ಹಿರಿಯೂರಿಗೆ ರೈಲ್ವೆ ಸೌಲಭ್ಯ ಸಿಗಲಿ

ಗುರುವಾರ , ಜೂಲೈ 18, 2019
24 °C

ಹಿರಿಯೂರಿಗೆ ರೈಲ್ವೆ ಸೌಲಭ್ಯ ಸಿಗಲಿ

Published:
Updated:

ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಮಂತ್ರಿಗಳಾಗಿರುವುದು ಸಂತೋಷದ ಸಂಗತಿ. ಈಗ ಜನರ ನಿರೀಕ್ಷೆಗಳು ಪುನಃ ಚಿಗುರೊಡೆದಿವೆ.ರಾಜ್ಯದ ಅನೇಕ ರೈಲ್ವೆ ಯೋಜನೆಗಳ ಪೈಕಿ ಚಿತ್ರದುರ್ಗದಿಂದ- ಹಿರಿಯೂರು-ಶಿರಾ ಮಾರ್ಗವಾಗಿ ತುಮ ಕೂರಿಗೂ ಹಾಗೂ ಮೈಸೂರಿಗೂ ಬೆಂಗಳೂರು- ತುಮಕೂರು- ಶಿರಾ-ಹಿರಿಯೂರು ಮಾರ್ಗ ವಾಗಿ ಚಿತ್ರದುರ್ಗ ಮತ್ತು ಹಿರಿಯೂರಿನಿಂದ ಚಳ್ಳಕೆರೆಗೆ ರೈಲ್ವೆ ಮಾರ್ಗವಾದರೆ ಇಲಾಖೆಗೂ ಲಾಭವಾಗುವುದಲ್ಲದೆ ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ತುಂಬಾ ಅನುಕೂಲವಾಗುತ್ತದೆ.ಈಗ ಬಹುತೇಕ ಸರಕು ಸಾಗಣೆ ಲಾರಿಗಳಲ್ಲಿಯೇ ಆಗುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಮೇಲಿನ ರೈಲ್ವೆ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುತ್ತಾರೆಂಬುದು ನಮ್ಮ ನಂಬಿಕೆ.

          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry