ಹಿರಿಯೂರು: ಎರೆಹುಳು ಗೊಬ್ಬರ, ಜೀವಾಮೃತ ತಯಾರಿಕೆ ತರಬೇತಿ

7

ಹಿರಿಯೂರು: ಎರೆಹುಳು ಗೊಬ್ಬರ, ಜೀವಾಮೃತ ತಯಾರಿಕೆ ತರಬೇತಿ

Published:
Updated:

ಚಿಕ್ಕಜಾಜೂರು: ಸಮೀಪದ ಹಿರಿಯೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಬುಧವಾರ ಏರ್ಪಡಿಸಿದ್ದ ಕೃಷಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಪ್ರದೀಪ್‌ಕುಮಾರ್ ಎರೆಹುಳು ಗೊಬ್ಬರ ಹಾಗೂ ಜೀವಾಮೃತ ತಯಾರಿಕೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.ಜಮೀನಿನಲ್ಲಿ ದೊರೆಯುವ ಕಸ-ಕಡ್ಡಿ, ಹಸಿರು ಮತ್ತು ಒಣಗಿದ ಎಲೆಗಳನ್ನು ಬಳಸಿ ಎರೆಹುಳು ಗೊಬ್ಬರ ಹಾಗೂ ಕಾಂಪೋಸ್ಟ್ ಗೊಬ್ಬರ  ತಯಾರಿಸಿ, ಮಣ್ಣಿನ ಫಲವತ್ತತೆ ಹೆಚ್ಚಿಸುವಂತೆ ಅವರು ರೈತರಿಗೆ ಮಾಹಿತಿ ನೀಡಿದರು.ಜಾನುವಾರು ಗಂಜಲವನ್ನು ಸಂಗ್ರಹಿಸಿ ಜೀವಾಮೃತ ಸಿದ್ಧಪಡಿಸಿ, ಅಡಿಕೆ, ತೆಂಗು ಮತ್ತಿತರ ಬೆಳೆಗಳಿಗೆ ಬಳಸುವುದರಿಂದ ಉತ್ತಮವಾದ ಫಸಲನ್ನು ಪಡೆಯಬಹುದು ಎಂದು ಅವರು ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈನುಗಾರಿಕೆ ಮೇಲ್ವಿಚಾರಕ ಮಂಜುನಾಥ್ ಮಾತನಾಡಿ, ಕೃಷಿಗೆ ಪೂರಕವಾಗುವ ಹೈನುಗಾರಿಕೆ ಅವಲಂಬಿಸುವಂತೆ ಕರೆ ನೀಡಿದರು.ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಸಬಲರಾಗುವುದರ ಜತೆಗೆ, ಜಮೀನಿಗೆ ಉತ್ತಮ ಗೊಬ್ಬರ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಮಂಜುಳಾ, ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಚಿದಾನಂದಪ್ಪ, ಪ್ರಗತಿ ಬಂಧು ಸದಸ್ಯರು, ಪ್ರತಿನಿಧಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry