ಹಿರಿಯೂರು: ಬಿಜೆಪಿ ವಿಜಯೋತ್ಸವ

7

ಹಿರಿಯೂರು: ಬಿಜೆಪಿ ವಿಜಯೋತ್ಸವ

Published:
Updated:

ಹಿರಿಯೂರು: ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪು ಜನಪ್ರತಿನಿಧಿಗಳಿಗೆ ಎಚ್ಚರಿಕೆ ಗಂಟೆಯಾಗಿದ್ದು, ತೀರ್ಪಿನ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನ್ಯಾಯಾಂಗದ ಘನತೆಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ಯಾದವ್ ವಿಷಾದ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.ನ್ಯಾಯಾಧೀಶರು ಪ್ರಕರಣ ಅಧ್ಯಯನ ಮಾಡಿ, ತೀರ್ಪು ನೀಡಿದ್ದಾರೆ.ಸರ್ಕಾರದ ಎಲ್ಲಾ ಸವಲತ್ತು ಅನುಭವಿಸಿ, ತೀರ್ಪಿನ ನಂತರ ಮುಖ್ಯಮಂತ್ರಿಯನ್ನು ಟೀಕೆ ಮಾಡುತ್ತಿರುವ ಪಕ್ಷೇತರರು, ತಮ್ಮನ್ನು ಯಾರು ದಾರಿ ತಪ್ಪಿಸಿದರು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಬಿಜೆಪಿ ಮುಖಂಡ ಎನ್.ಆರ್. ಲಕ್ಷ್ಮೀಕಾಂತ್, ಮಾಜಿ ಶಾಸಕ ಆರ್. ರಾಮಯ್ಯ, ವೈ.ಎಸ್. ಅಶ್ವತ್ಥ ಕುಮಾರ್, ಮೂಡಲಗಿರಿಯಪ್ಪ ಮಾತನಾಡಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry